ಭಾರತ ತಂಡವನ್ನು ಮತ್ತೆ ಮತ್ತೆ ಸೋಲಿಸಬೇಕು: ರಮೀಜ್​ ರಾಜಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಿಸಿಬಿ ಅಧ್ಯಕ್ಷ ಸ್ಥಾನ ಕಳೆದುಕೊಂಡರು ಭಾರತ ವಿರುದ್ದದ ತನ್ನ ಹೇಳಿಕೆಯನ್ನು ನಿಲ್ಲಿಸಿದ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ರಮೀಜ್​ ರಾಜಾ ಅವರು ಮತ್ತೆ ಹೇಳಿಕೆ ನೀಡಿದ್ದಾರೆ.

ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಅಭಿಮಾನಿಗಳ ಜತೆ ಮಾತನಾಡಿದ ಅವರು ಭಾರತ ತಂಡವನ್ನು ಪದೇ ಪದೆ ಸೋಲಿಸಬೇಕು ಹಾಗೂ ಅವರ ಆತ್ಮ ವಿಶ್ವಾಸವನ್ನು ಕುಗ್ಗಿಸಬೇಕು ಎಂಬುದಾಗಿ ಬಾಬರ್ ಅಜಮ್​ ಪಡೆಗೆ ಕರೆ ಕೊಟ್ಟಿದ್ದಾರೆ.

ಭಾರತ ಕ್ರಿಕೆಟ್​ ತಂಡಕ್ಕೆ ತಾನು ವಿಶ್ವದ ಸೂಪರ್​ ಪವರ್​ ಎಂಬ ಭ್ರಮೆ ಇದೆ. ಅದನ್ನು ಹೋಗಲಾಡಿಸಬೇಕಾದರೆ ಅವರನ್ನು ಆಗಾಗ ಸೋಲಿಸುತ್ತಿರಬೇಕು. ಕಳೆದ ಎರಡು ವರ್ಷಗಳಲ್ಲಿ ಭಾರತ ತಂಡವನ್ನು ಎರಡು ಬಾರಿ ಸೋಲಿಸಿದ್ದೇವೆ. ಇದರಿಂದ ಅವರ ಅಹಂಕಾರ ಕಡಿಮೆಯಾಗಿದೆ. ಮುಂದೆಯೂ ಅವಕಾಶ ಸಿಕ್ಕಾಗ ಸೋಲಿಸುತ್ತಿರಬೇಕು ಎಂಬದಾಗಿ ರಮೀಜ್​ ಹೇಳಿದ್ದಾರೆ.

ತಾನು ದೊಡ್ಡವನು ಎಂಬ ಭ್ರಮೆಯಿಂದಲೇ ಬಿಸಿಸಿಐ ತನಗೆ ಬೇಕಾದ ರೀತಿಯಲ್ಲಿ ವರ್ತಿಸುತ್ತಿದೆ. ಏಷ್ಯಾ ಕಪ್​ ಅನ್ನು ಪಾಕಿಸ್ತಾನ ಬಿಟ್ಟು ಬೇರೆ ಕಡೆಯಲ್ಲಿ ನಡೆಸುವುದಾಗಿ ಹೇಳುತ್ತಿದೆ.ಈ ಮಾದರಿಯ ವರ್ತನೆಗಳನ್ನು ನಿಲ್ಲಿಸಬೇಕಾದರೆ ಭಾರತ ತಂಡವನ್ನು ನಿರಂತರವಾಗಿ ಸೋಲಿಸುತ್ತಿರಬೇಕು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!