ʼನನ್ನಲ್ಲಿ ಮತ್ತೆ ಉತ್ಸಾಹ ಮರಳಿದೆʼ.‌. ಕಂಬ್ಯಾಕ್ ಬಗ್ಗೆ ಕಿಂಗ್ ಕೊಹ್ಲಿ ಮನದ ಮಾತು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕ್ರಿಕೆಟ್‌ ಅಂಗಳದಲ್ಲಿ ನಿರಂತರ ವೈಫಲ್ಯಗಳಿಂದ ಟೀಕೆಯನ್ನು ಎದುರಿಸಿದ್ದ ವಿರಾಟ್ ಕೊಹ್ಲಿ ಏಷ್ಯಾಕಪ್‌ ಟಿ.20ಯಲ್ಲಿ ಭರ್ಜರಿ ಫಾರ್ಮ್ಗೆ ಮರಳಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಎರಡು ಅರ್ಧಶತಕ ಸಿಡಿಸಿರುವ ಕೊಹ್ಲಿ ತಾನು ಈಗಲೂ ಮ್ಯಾಚ್‌ ವಿನ್ನರ್‌ ಎಂಬುದನ್ನು ಸಾರಿದ್ದಾರೆ. ಭಾನುವಾರ ದುಬೈ ಕ್ರೀಡಾಂಗಣದಲ್ಲಿ ನಡೆದ ಪಾಕ್‌ ವಿರುದ್ಧದ ಪಂದ್ಯದಲ್ಲಿ ಕುಸಿದ ಟೀಂ ಇಂಡಿಯಾಕ್ಕೆ ಕೊಹ್ಲಿ ಆಸರೆಯಾಗಿದ್ದರು. 44 ಎಸೆತಗಳಲ್ಲಿ 60 ರನ್‌ ಸಿಡಿಸಿ ತಂಡವನ್ನು ಉತ್ತಮ ಮೊತ್ತದೆಡೆಗೆ ಕೊಂಡೊಯ್ದರು. ಪಂದ್ಯ ಮುಗಿದ ಬಳಿಕ ಹಲವಾರು ವಿಚಾರಗಳ ಕುರಿತಾಗಿ ವಿರಾಟ್‌ ಮನಬಿಚ್ಚಿ ಮಾತನಾಡಿದ್ದಾರೆ.
ʼಟೀಕೆಗಳ ಬಗ್ಗೆ ಎಂದಿಗೂ ಗಮನ ಹರಿಸುವುದಿಲ್ಲ. ನಾನು 14 ವರ್ಷಗಳಿಂದ ಕ್ರಿಕೆಟ್‌ ಆಡುತ್ತಿದ್ದೇನೆ. ಇದು ಆಕಸ್ಮಿಕವಲ್ಲ. ನನ್ನ ಕೆಲಸವೆಂದರೆ ನನ್ನ ಆಟದ ಮೇಲೆ ಗಮನಹರಿಸುವುದು. ನಾನು ತಂಡಕ್ಕಾಗಿ ಹೆಚ್ಚಿನದನ್ನು ಸಾಧಿಸಲು ಉತ್ಸುಕನಾಗಿದ್ದೇನೆ ಮತ್ತು ನಾನು ಅದನ್ನು ಮುಂದುವರಿಸಲಿದ್ದೇನೆ ಎಂದು ಕೊಹ್ಲಿ ಹೇಳಿದರು.
ʼಅವರು (ವಿಮರ್ಶಕರು) ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ನನ್ನ ಕೆಲಸವೆಂದರೆ ಆಡುವುದು. ತಂಡಕ್ಕಾಗಿ ನನ್ನ 120 ಪ್ರತಿಶತವನ್ನು ನೀಡುವುದು. ತಂಡವು ನನ್ನ ಬಗ್ಗೆ ನಂಬಿಕೆ ಹೊಂದಿರುವವರೆಗೆ ನಾನದನ್ನು ಮಾಡುತ್ತೇನೆ. ʼಜನರಿಗೆ ಅವರದ್ದೇ ಆದ ಅಭಿಪ್ರಾಯಗಳಿವೆ. ಆದರೆ ಅದು ನನ್ನ ಸಂತೋಷಕ್ಕೆ ಅಡ್ಡಿಯಾಗುವುದಿಲ್ಲʼ ಎಂದು ಅವರು ಹೇಳಿದರು.
ಏಷ್ಯಾಕಪ್‌ನ ಮುಂಚಿನ ವಿರಾಮವು ನನ್ನ ಪಾಲಿಗೆ ಸ್ವಾಗತಾರ್ಹವಾಗಿತ್ತು. ಕೆಲಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ ನ ಒತ್ತಡದಿದ್ದ ದೂರವಿದ್ದುದು ನನ್ನಲ್ಲಿ ಮತ್ತೆ ಕ್ರಿಕೆಟ್ ಆಡಲು ಹೊಸ ಚೈತನ್ಯವನ್ನು ತಂದಿದೆ. ವಿರಾಮದಿಂದ ಹಿಂತಿರುಗಿದಾಗ ಡ್ರೆಸ್ಸಿಂಗ್ ರೂಮ್ ಪರಿಸರವು ಆಹ್ಲಾದಕರವೆನಿಸಿತು. ಅದು ನನ್ನಲ್ಲಿ ಉತ್ಸಾವನ್ನು ಮರಳಿಸಿದೆ. ನಾನು ಮತ್ತೆ ನನ್ನ ಆಟವನ್ನು ಸಂಪೂರ್ಣವಾಗಿ ಆನಂದಿಸಲು ಪ್ರಾರಂಭಿಸಿದ್ದೇನೆ ಎಂದು ಕೊಹ್ಲಿ ಹೇಳಿದಾರೆ.
“ನಾನು ಇಲ್ಲಿಗೆ ಬಂದಾಗ, ಪರಿಸರವು ನನ್ನನ್ನು ಸ್ವಾಗತಿಸಿತು. ತಂಡದ ಹುಡುಗರೊಂದಿಗಿನ ಒಡನಾಟ ಅದ್ಭುತವಾಗಿದೆ. ತಂಡದಲ್ಲಿನ ವಾತಾವರಣವು ಅದ್ಭುತವಾಗಿದೆ, ನಾನು ಮತ್ತೆ ಆಡುವುದನ್ನು ಸಂಪೂರ್ಣವಾಗಿ ಪ್ರೀತಿಸುತ್ತೇನೆ ಮತ್ತು ನನ್ನ ಬ್ಯಾಟಿಂಗ್ ಬಗ್ಗೆ ಸಕಾರಾತ್ಮಕ ಭಾವನೆ ಹೊಂದುತ್ತಿದ್ದೇನೆ, ”ಎಂದಿದ್ದಾರೆ. ಮಂಗಳವಾರ ದುಬೈನಲ್ಲಿ ನಡೆಯಲಿರುವ ಸೂಪರ್ 4 ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದ ಪಂದ್ಯದಲ್ಲಿ ಭಾರತವು ಶ್ರೀಲಂಕಾವನ್ನು ಎದುರಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!