6 ಮೇಡಿನ್‌, 5 ವಿಕೆಟ್… ವೇಗಿ ಸಿರಾಜ್‌ ಮಾರಕ ದಾಳಿಗೆ ಕಂಗಾಲಾದ ಎದುರಾಳಿ

ಹೊಸದಿಗಿಂತ ಡಿಜಿಟಲ್‌ ಡೆಸ್ಕ್‌
ಕಳೆದ ಒಂದು ವರ್ಷದಿಂದ ಟಿ20 ಯಲ್ಲಿ ವೇಗಿ ಸಿರಾಜ್‌ ಫಾರ್ಮ್‌ ಅಷ್ಟೇನು ಚೆನ್ನಾಗಿಲ್ಲ. ಮೊದಲು ಟಿ 20 ತಂಡದಿಂದ ಹೊರಬಿದ್ದ ಸಿರಾಜ್‌ ಸದ್ಯ, ಟಿ 20 ವಿಶ್ವಕಪ್‌ ನಲ್ಲೂ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಟೀಂ ಇಂಡಿಯಾವನ್ನು ಮೂರು ಫಾರ್ಮ್ಯಾಟ್‌ ನಲ್ಲಿಯೂ ಪ್ರತಿನಿಧಿಸುವ ಆಸೆ ಹೊತ್ತಿರುವ ಸಿರಾಜ್‌ ಫಾರ್ಮ್ ಮರಳಿ ಪಡೆಯಲು ಇಂಗ್ಲಿಷ್‌ ಕೌಂಟಿಯಲ್ಲಿ ಕಣಕ್ಕಿಳಿದಿದ್ದಾರೆ. ಕೌಂಟಿ ಚಾಂಪಿಯನ್‌ಶಿಪ್‌ನ ಡಿವಿಷನ್-1 ರಲ್ಲಿ  ವಾರ್ವಿಕ್‌ಶೈರ್ ಪರ ಚೊಚ್ಚಲ ಪಂದ್ಯವಾಡಿದ ಸಿರಾಜ್ ಸೋಮರ್‌ಸೆಟ್ ತಂಡದ ವಿರುದ್ಧ ಮೊದಲ ಪಂದ್ಯದಲ್ಲೇ 5 ವಿಕೆಟ್‌ ಕಬಳಿಸುವ ಮೂಲಕ ದಾಖಲೆ ಬರೆದಿದ್ದಾರೆ.
ವಾರ್ವಿಕ್‌ಷೈರ್‌ ಪರ ಒಟ್ಟು 24 ಓವರ್‌ ಎಸೆದ ಸಿರಾಜ್‌ 6 ಮೇಡಿನ್‌ ಸೇರಿದಂತೆ  82 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಪಡೆದರು. ಸಿರಾಜ್‌ ಮಾರಕ ದಾಳಿಗೆ ನಲುಗಿದ ಸೋಮರ್‌ಸೆಟ್ ಕೇವಲ 219 ರನ್‌ಗಳಿಗೆ  ಆಲೌಟ್‌ ಆಯ್ತು.

ಸಿರಾಜ್ ಅವರ  ಪಾಕಿಸ್ತಾನದ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್, ಜಾರ್ಜ್ ಬಾರ್ಟ್ಲೆಟ್, ಜೇಮ್ಸ್ ರೆವ್, ಲೆವಿಸ್ ಗ್ರೆಗೊರಿ ಮತ್ತು ಜೋಶ್ ಡೇವಿ ಅವರ ವಿಕೆಟ್‌ ಗಳನ್ನು ಪಡೆದರು. ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ಐದು ಟೆಸ್ಟ್‌ಗಳ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸುವಲ್ಲಿ ಸಿರಾಜ್ ನಿರ್ಣಾಯಕ ಪಾತ್ರ ವಹಿಸಿದ್ದರು. ಕೊನೆಯ ಟೆಸ್ಟ್ ಪಂದ್ಯವನ್ನು ಜುಲೈನಲ್ಲಿ ಇಂಗ್ಲೆಂಡ್ ಗೆದ್ದು ಸರಣಿಯನ್ನು ಸಮಬಲಗೊಳಿಸಿತು.
ಕಳೆದ ಬಾರಿಯ ಐಪಿಎಲ್‌ ನಲ್ಲಿ ಆರ್ಸಿಬಿ ಪರ ಸಿರಾಜ್‌ ಕಳಪೆ ಬೌಲಿಂಗ್‌ ಭಾರೀ ಟೀಕೆಗೆ ಒಳಗಾಗಿತ್ತು  ಕೌಂಟಿ ಕ್ರಿಕೆಟ್​ನಲ್ಲಿ ಭರ್ಜರಿ ಕಮ್‌ ಬ್ಯಾಕ್‌ ಮಾಡುವ ಮೂಲಕ ಟೀಮ್ ಇಂಡಿಯಾದ ಸೀಮಿತ ಓವರ್‌ ಗಳ ತಂಡದಲ್ಲಿ ಸ್ಥಾನ ಗಟ್ಟಿಮಾಡಿಕೊಳ್ಳಲು ಮೊಹಮ್ಮದ್ ಸಿರಾಜ್ ಸಿದ್ಧತೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!