Wednesday, October 5, 2022

Latest Posts

ಅಬ್ಬಬ್ಬಾ ಇವ ಸಾಮಾನ್ಯದವನಲ್ಲ! ಕೋಪಗೊಂಡ ಟೀಚರ್‌ಗೆ ಮುತ್ತು ಕೊಟ್ಟು ಕೂಲ್ ಮಾಡಿದ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ಚಿಕ್ಕ ಮಕ್ಕಳು ತುಂಬಾ ಮುಗ್ಧರು ಮತ್ತು ಮುದ್ದಾಗಿರುತ್ತಾರೆ. ಅವರ ಚೇಷ್ಟೆ, ತಮಾಷೆ ಮತ್ತು ಮುದ್ದಾದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅಂತಹದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ, ಬಾಲಕನೊಬ್ಬ ಶಾಲೆಯಲ್ಲಿ ಕೋಪಗೊಂಡ ಶಿಕ್ಷಕಿಯನ್ನು ಕೂಲ್‌ ಮಾಡಲು ಮುತ್ತು ಕೊಟ್ಟಿದ್ದಾನೆ.

ವೈರಲ್ ಆಗಿರುವ ಈ ವಿಡಿಯೋದಲ್ಲಿ ಬಾಲಕನೊಬ್ಬ ತನ್ನೊಂದಿಗೆ ಮಾತನಾಡದ ಶಿಕ್ಷಕಿಯ ಮನವೊಲಿಸಲು ಸಖತ್‌ ನೈಸ್‌ ಮಾಡಲು ಪ್ರಯತ್ನಿಸಿದ್ದಾನೆ. ಟೀಚರ್‌ ಬಗ್ಗದ ಕಾರಣ ಶಿಕ್ಷಕಿಯ ಹೆಗಲ ಮೇಲೆ ಕೈಯಿಟ್ಟು ತಬ್ಬಿ ಮುತ್ತಿಟ್ಟನು. ಟೀಚರ್ ಕೂಡ ನಗುತ್ತಾ ಮಗುವಿನ ಕೆನ್ನೆಗೆ ಮತ್ತೊಮ್ಮೆ ಪ್ರೀತಿಯಿಂದ ಮುತ್ತಿಟ್ಟರು. ಮಗುವಿನ ಮುದ್ದಾದ ನಡತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!