ಬಣ್ಣದೊಕುಳಿ ಆಡಿ ಸಂಭ್ರಮಿಸಿದ ಟೀಮ್ ಇಂಡಿಯಾ ಆಟಗಾರರು!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್​ ಪಂದ್ಯವನ್ನಾಡಲು ಅಹಮದಾಬಾದ್​ ಗೆ ಬಂದಿಳಿದ ಟೀಮ್ ಇಂಡಿಯಾ ಇಂದು ಹೋಳಿ ಹಬ್ಬ ಆಚರಿಸಿದೆ.

ತಂಡದ ಬಸ್‌ನಲ್ಲಿ ಕ್ರಿಕೆಟಿಗರು ಬಣ್ಣ ಎರಚಿ ಸಂಭ್ರಮ ಶುರು ಮಾಡಿದ್ದು, ಒಬ್ಬರಿಗೊಬ್ಬರು ಬಣ್ಣದೊಕುಳಿ ಆಡಿದ್ದಾರೆ. ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ, ಶುಬಮನ್ ಗಿಲ್ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಬಸ್‌ನಲ್ಲಿ ಹೋಳಿ ಸಂಭ್ರಮ ಶುರುಮಾಡಿದ್ದಾರೆ. ಬಳಿಕ ಈ ಸಂಭ್ರಮ ಹೊಟೆಲ್, ಆಟಗಾರರ ರೂಂನಲ್ಲೂ ಅದ್ಧೂರಯಾಗಿ ಆಚರಿಸಲಾಗಿದೆ.

https://twitter.com/BCCI?ref_src=twsrc%5Etfw%7Ctwcamp%5Etweetembed%7Ctwterm%5E1633088721728991233%7Ctwgr%5Edbf0e91a018c17876b9ea1bc574760806e13a1fe%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fvistaranews-epaper-vistaran%2Flatest-updates-latest%2F%3Fmode%3Dpwa

ಟೀಂ ಇಂಡಿಯಾದ ಎಲ್ಲಾ ಕ್ರಿಕೆಟಿಗರು, ಸಿಬ್ಬಂದಿಗಳು ಬಣ್ಣದಲ್ಲಿ ಮುಳುಗಿದ್ದಾರೆ. ಶುಭಮನ್ ಗಿಲ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇತ್ತ ಅಕ್ಸರ್ ಪಟೇಲ್, ಸೂರ್ಯಕುಮಾರ್ ಯಾದವ್, ಚೇತೇಶ್ವರ ಪೂಜಾರ ಸೇರಿದಂತೆ ಕ್ರಿಕೆಟಿಗರ ಸಂಭ್ರಮ ಇದೀಗ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!