ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಮುಶೀರ್ ಖಾನ್ ಕಾರು ಅಪಘಾತ: ಆರೋಗ್ಯದ ಕುರಿತು ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಬೆಳಿಗ್ಗೆ (ಸೆಪ್ಟೆಂಬರ್ 28) ಉತ್ತರ ಪ್ರದೇಶದಿಂದ ಲಕ್ನೋಗೆ ತೆರೆಳುತ್ತಿರುವಾಗ ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಮುಶೀರ್ ಖಾನ್ ಕಾರು ಅಪಘಾತಕ್ಕೀಡಾಗಿದ್ದು, ಈ ಅಪಘಾತದಲ್ಲಿ ಮುಶೀರ್ ಅವರ ಕುತ್ತಿಗೆಯ ಬಾಗಕ್ಕೆ ತೀವ್ರ ಗಾಯಗಳಾಗಿವೆ .

ಇದೀಗ ಮುಶೀರ್ ಖಾನ್ ಅವರ ಸದ್ಯದ ಪರಿಸ್ಥಿತಿಯ ಬಗ್ಗೆ ಲಕ್ನೋದ ಮೇದಾಂತ ಆಸ್ಪತ್ರೆ ಹೆಲ್ಸ್ ಬುಲೆಟಿನ್ ಬಿಡುಗಡೆ ಮಾಡಿದೆ. ಅದರ ಪ್ರಕಾರ, ಮುಶೀರ್ ಖಾನ್ ಅವರ ಆರೋಗ್ಯ ಸದ್ಯಕ್ಕೆ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ವಾಸ್ತವವಾಗಿ ಮುಶೀರ್ ಖಾನ್ ಮುಂದಿನ ತಿಂಗಳು ನಡೆಯಲ್ಲಿರುವ ಇರಾನಿ ಕಪ್ ಪಂದ್ಯಕ್ಕಾಗಿ ಲಕ್ನೋಗೆ ಹೋಗುತ್ತಿದ್ದಾಗ ಅಪಘಾತಕ್ಕೀಡಾಗಿದ್ದರು. ಈ ಪಂದ್ಯದಲ್ಲಿ ಮುಂಬೈ ತಂಡದ ಭಾಗವಾಗಿರುವ ಮುಶೀರ್ ಖಾನ್, ರೆಸ್ಟ್ ಆಫ್ ಇಂಡಿಯಾ ತಂಡದ ವಿರುದ್ಧ ಕಣಕ್ಕಿಳಿಯಬೇಕಿತ್ತು. ಆದರೀಗ ಅಪಘಾತಕ್ಕೀಡಾಗಿರುವ ಮುಶೀರ್ ಈ ಪಂದ್ಯದಿಂದ ಹೊರಬಿದ್ದಿರುವುದಲ್ಲದೆ, ತಿಂಗಳುಗಳ ಕಾಲ ಕ್ರಿಕೆಟ್​ನಿಂದ ದೂರ ಉಳಿಯಲಿದ್ದಾರೆ ಎಂದು ವರದಿಯಾಗಿದೆ.

ಲಕ್ನೋದ ಮೇದಾಂತ ಆಸ್ಪತ್ರೆಯು ಮುಶೀರ್ ಖಾನ್ ಆರೋಗ್ಯದ ಕುರಿತು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು ಅದರಲ್ಲಿ, ‘ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಕ್ರಿಕೆಟರ್ ಮುಶೀರ್ ಖಾನ್ ಅವರನ್ನು ತುರ್ತು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆತರಲಾಗಿತ್ತು. ಅವರಿಗೆ ಆರ್ಥೋಪೆಡಿಕ್ಸ್ ವಿಭಾಗದ ನಿರ್ದೇಶಕ ಡಾ.ಧರ್ಮೇಂದ್ರ ಸಿಂಗ್ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂಬ ಮಾಹಿತಿ ನೀಡಿದೆ.

ಮುಶೀರ್​ ಖಾನ್ ಅವರ ಮೇಲೆ ಬಿಸಿಸಿಐ ಮತ್ತು ಎಂಸಿಎ ವೈದ್ಯಕೀಯ ತಂಡಗಳು ಕಣ್ಣಿಟ್ಟಿವೆ. ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಗುಣಮುಖರಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಕರೆತರಲಾಗುವುದು ಎಂದಿದೆ.

ಇತ್ತೀಚೆಗಷ್ಟೇ ನಡೆದಿದ್ದ ದುಲೀಪ್ ಟ್ರೋಫಿಯಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದ ಮುಶೀರ್ ಖಾನ್ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ್ದರು. ಸದ್ಯಕ್ಕೆ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಮುಶೀರ್ ಖಾನ್​ ಇಂಜುರಿಗೊಂಡಿರುವುದು ಮುಂಬೈ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!