October 24, 2026
Saturday, October 24, 2026
spot_img

Tech | ಅನ್-ವಾಂಟೆಡ್ ಕಾಲ್ಸ್, ಮೆಸೇಜ್‌ಗಳ ಕಾಟವೇ? ಸ್ಪ್ಯಾಮ್ ಬ್ಲಾಕ್ ಮಾಡಲು ಇಲ್ಲಿದೆ ಸಿಂಪಲ್ ಟ್ರಿಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಿನಾ ಬೆಳಗ್ಗೆ ಎದ್ದ ತಕ್ಷಣ “ನಿಮಗೆ ಸಾಲ ಬೇಕೇ?”, “ಲಾಟರಿ ಗೆದ್ದಿದ್ದೀರಿ” ಅಥವಾ ನಕಲಿ ಬ್ಯಾಂಕ್ ಆಫರ್‌ಗಳ ಕರೆ ಹಾಗೂ ಮೆಸೇಜ್‌ಗಳು ಬಂದು ನಿಮ್ಮ ನೆಮ್ಮದಿ ಕೆಡಿಸುತ್ತಿವೆಯೇ? ಇಂತಹ ‘ಸ್ಪ್ಯಾಮ್’ ಕರೆಗಳು ಕೇವಲ ಕಿರಿಕಿರಿ ಮಾತ್ರವಲ್ಲ, ಹಲವು ಬಾರಿ ಸೈಬರ್ ವಂಚನೆಗೂ ದಾರಿಮಾಡಿಕೊಡುತ್ತವೆ. ಈ ಸೈಬರ್ ಕಿರಿಕಿರಿಯಿಂದ ತಕ್ಷಣ ಮುಕ್ತಿ ಪಡೆಯಲು ನಿಮ್ಮ ಮೊಬೈಲ್‌ನಲ್ಲಿಯೇ ಕೆಲವು ಸರಳ ಹಂತಗಳನ್ನು ಅನುಸರಿಸಬಹುದು.

‘DND’ ಸೇವೆ ಸಕ್ರಿಯಗೊಳಿಸಿ

ನಿಮ್ಮ ಸಿಮ್ ಪೂರೈಕೆದಾರರ (Airtel, Jio, Vi, BSNL) ಅಧಿಕೃತ ಆಪ್‌ಗೆ ಹೋಗಿ ‘DND’ ಆಯ್ಕೆಯನ್ನು ಆನ್ ಮಾಡಿ. ಅಥವಾ ನಿಮ್ಮ ಮೊಬೈಲ್‌ನಿಂದ START 0 ಎಂದು ಟೈಪ್ ಮಾಡಿ 1909 ಸಂಖ್ಯೆಗೆ ಉಚಿತ SMS ಕಳುಹಿಸಿ. ಇದರಿಂದ ಹೆಚ್ಚಿನ ಕಂಪನಿಗಳ ಪ್ರಚಾರದ ಕರೆಗಳು ಹಾಗೂ ಮೆಸೇಜ್‌ಗಳು ತಕ್ಷಣವೇ ನಿಲ್ಲುತ್ತವೆ.

ಫೋನ್‌ನಲ್ಲೇ ಇದೆ ಸ್ಪ್ಯಾಮ್ ಬ್ಲಾಕರ್ ಫೀಚರ್

ಈಗಿನ ಪ್ರತಿಯೊಂದು ಆಂಡ್ರಾಯ್ಡ್ ಮತ್ತು ಐಫೋನ್‌ಗಳಲ್ಲಿ ಇನ್‌ಬಿಲ್ಟ್ ಸ್ಪ್ಯಾಮ್ ಫಿಲ್ಟರ್ ಇರುತ್ತದೆ.

ಆಂಡ್ರಾಯ್ಡ್: ಫೋನ್‌ನ ‘Dialer Settings’ಗೆ ಹೋಗಿ ‘Caller ID & Spam’ ಆಯ್ಕೆಯನ್ನು ಆನ್ ಮಾಡಿ.

ಐಫೋನ್: Settings > Phone > ‘Silence Unknown Callers’ ಆಯ್ಕೆಯನ್ನು ಸಕ್ರಿಯಗೊಳಿಸಿ.

ಮೆಸೇಜ್ ಹಾಗೂ ಲಿಂಕ್ ಮುಟ್ಟಬೇಡಿ

ಆಕರ್ಷಕ ಕೊಡುಗೆ ಅಥವಾ ಹಣದ ಆಸೆ ತೋರಿಸಿ ಬರುವ ಮೆಸೇಜ್‌ಗಳಲ್ಲಿರುವ ಲಿಂಕ್‌ಗಳ ಮೇಲೆ ಎಂದಿಗೂ ಕ್ಲಿಕ್ ಮಾಡಬೇಡಿ. ಅನಪೇಕ್ಷಿತ ಮೆಸೇಜ್ ಕಳುಹಿಸಿದ ಸಂಖ್ಯೆಯನ್ನು ತಕ್ಷಣ ‘Report & Block’ ಮಾಡಿ. ಅಪರಿಚಿತ ವ್ಯಕ್ತಿಗಳು ಕರೆ ಮಾಡಿ OTP ಅಥವಾ ಬ್ಯಾಂಕ್ ವಿವರಗಳನ್ನು ಕೇಳಿದರೆ ಯಾವುದೇ ಕಾರಣಕ್ಕೂ ನೀಡಬೇಡಿ.

ಥರ್ಡ್ ಪಾರ್ಟಿ ಆಪ್‌ಗಳ ಸಹಾಯ ಪಡೆಯಿರಿ

‘ಟ್ರೂಕಾಲರ್’ ನಂತಹ ಆಪ್‌ಗಳನ್ನು ಬಳಸಿ ಅಜ್ಞಾತ ಕರೆಗಳ ಗುರುತು ತಿಳಿಯಬಹುದು ಮತ್ತು ಸ್ವಯಂಚಾಲಿತವಾಗಿ ಸ್ಪ್ಯಾಮ್ ಕರೆಗಳನ್ನು ಬ್ಲಾಕ್ ಮಾಡಬಹುದು.

ನೆನಪಿಡಿ.. ನಿಮ್ಮ ಜಾಗರೂಕತೆಯೇ ಸೈಬರ್ ಭದ್ರತೆಗೆ ಅತಿ ದೊಡ್ಡ ಅಸ್ತ್ರ. ಇಂದೇ ಈ ನಿಯಮಗಳನ್ನು ಪಾಲಿಸಿ, ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿಸಿಕೊಳ್ಳಿ.

Must Read