June 18, 2026
Thursday, June 18, 2026
spot_img

ಅಮ್ಮನ ಜತೆ ಮಾತನಾಡುತ್ತಲೇ ಜೀವ ಬಿಟ್ಟ ಟೆಕ್ಕಿ, ಯಮನಂತೆ ಕಾಡಿತ್ತು ಬ್ರೈನ್‌ ಸ್ಟ್ರೋಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಮ್ಮನ ಜೊತೆ ನಗುತ್ತಾ ಮಾತನಾಡುವಾಗಲೇ ಟೆಕ್ಕಿಯೊಬ್ಬರು ಪ್ರಾಣಬಿಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹಾಸನದ ಶ್ವೇತಾಗೆ ಬರೀ 25 ವರ್ಷ. ಇವರು ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ವೀಕೆಂಡ್‌ನ್ನು ತಂದೆ ತಾಯಿ ಜೊತೆ ಕಳಿಯಬೇಕೆಂದು ಹಾಸನಕ್ಕೆ ಬಂದಿದ್ದರು.

ಅಮ್ಮನ ಜೊತೆ ಮಾತಾಡ್ತಾ ಏನನ್ನೋ ಹೇಳ್ತಾ ನಗ್ತಿದ್ದ ಶ್ವೇತಾ ಇದ್ದಕ್ಕಿದ್ದಂತೆಯೇ ಕುಸಿದುಬಿದ್ದರು. ಅವರಿಗೆ ಮಾತನಾಡಲು ಆಗಲಿಲ್ಲ. ನಂತರ ಪೋಷಕರು ಶ್ವೇತಾರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆ ವೇಳೆಗಾಗಲೇ ಶ್ವೇತಾ ಕೋಮಾಗೆ ಜಾರಿದ್ದರು.

ದಾರಿ ಮಧ್ಯದಲ್ಲಿಯೇ ಶ್ವೇತಾ ಮೆದುಳು ನಿಷ್ಕ್ರಿಯಗೊಂಡಿದೆ. ಮಗಳು ನಮ್ಮಿಂದ ದೂರ ಹೋಗಿದ್ದಾಳೆ ಎಂದು ಪೋಷಕರು ಅರಿತು ಅಲ್ಲಿಯೇ ಅಂಗಾಂಗ ದಾನಕ್ಕೆ ನಿರ್ಧರಿಸಿದ್ದಾರೆ. ಮಗಳ ಅಂಗಗಳನ್ನು ಅವಶ್ಯಕತೆ ಇರುವವರಿಗೆ ನೀಡಿ, ಅವರಲ್ಲಿ ತೃಪ್ತಿ ಕಾಣಲು ನಿರ್ಧರಿಸಿದ್ದರು. ಆದರೆ ಇಂದು ಬೆಳಗ್ಗೆ ಶ್ವೇತಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಶ್ವೇತಾ ಅಂಗಾಂಗ ದಾನವೂ ಇದೀಗ ಅಸಾಧ್ಯವಾಗಿದೆ.

ಯಾವ ಅನಾರೋಗ್ಯವೂ ಇಲ್ಲದೆ, ಆಸ್ಪತ್ರೆಯ ಮೆಟ್ಟಿಲೇ ಹತ್ತದ ಮಗಳು ಹೀಗೆ ಒಂದೇ ಕ್ಷಣದಲ್ಲಿ ನಮ್ಮನ್ನು ಬಿಟ್ಟುಹೋಗಿದ್ದಾಳೆ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ. ಹಾಸನದಲ್ಲಿ ಶ್ವೇತಾ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !