ತಾಂತ್ರಿಕ ದೋಷ: ಲಖನೌದತ್ತ ಹೊರಟ ವಿಮಾನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ ‌:

ಬೆಂಗಳೂರಿನಿಂದ ಲಖನೌದತ್ತ ಹೊರಟ ಎಐಎಕ್ಸ್ ಕನೆಕ್ಟ್ ವಿಮಾನವು (AIX Airlines Flight) ಶನಿವಾರ ತಾಂತ್ರಿಕ ದೋಷದಿಂದ ಟೇಕ್ ಆಫ್ ಆದ 10 ನಿಮಿಷಗಳ ನಂತರ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಬೆಂಗಳೂರಿನಿಂದ ಲಕ್ನೋಗೆ ಕಾರ್ಯಾಚರಣೆ ನಡೆಸಲು ಉದ್ದೇಶಿಸಿರುವ i5-2472, ಸಣ್ಣ ತಾಂತ್ರಿಕ ಸಮಸ್ಯೆಯನ್ನು ಎದುರಿಸಿದೆ ಎಂದು ಎಐಎಕ್ಸ್ ಕನೆಕ್ಟ್ ವಕ್ತಾರರು ತಿಳಿಸಿದ್ದಾರೆ.

i5-2472 ವಿಮಾನವು ಶನಿವಾರ ಬೆಳಿಗ್ಗೆ 6.45 ಕ್ಕೆ ಟೇಕ್ ಆಫ್ ಆಗಿದ್ದು, ಬೆಳಿಗ್ಗೆ 9 ಗಂಟೆಗೆ ಲಕ್ನೋದಲ್ಲಿ ಇಳಿಯಬೇಕಿತ್ತು. ಆದಾಗ್ಯೂ, ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು.

ಎಐಎಕ್ಸ್ ಕನೆಕ್ಟ್ ವಿಮಾನ ಮಾತ್ರವಲ್ಲದೆ, ಮತ್ತೊಂದು ವಿಮಾನದಲ್ಲಿ ಕೂಡ ತಾಂತ್ರಿಕ ದೋಷ ಕಂಡುಬಂದಿದೆ. ಆಕಾಶ್ ಏರ್​ಲೈನ್ಸ್​​ನ QP 1325 ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಆದರೆ ಟೇಕ್ ಆಫ್​ ಆಗುವ ಮುನ್ನವೇ ತಾಂತ್ರಿಕ ಸಮಸ್ಯೆ ಕಂಡುಬಂದ ಹಿನ್ನಲೆ ವಿಮಾನ ಹಾರಾಟ ನಡೆಸಿಲ್ಲ. ಈ ವಿಮಾನ ಬೆಂಗಳೂರಿನಿಂದ 175 ಜನರನ್ನು ಹೊತ್ತು ಅಹಮದಾಬಾದ್​ಗೆ ತೆರಳಬೇಕಿತ್ತು. ಆದರೆ ಟೇಕ್ ಆಫ್​ಗೂ ಮುನ್ನ ತಾಂತ್ರಿಕ ಸಮಸ್ಯೆ ತಿಳಿದುಬಂದ ಹಿನ್ನಲೆ ವಿಮಾನವನ್ನು ವಾಪಸ್ ನಿಲ್ದಾಣಕ್ಕೆ ತರಲಾಯಿತು. ಪ್ರಯಾಣಿಕರಿಗೆ ಬೇರೆ ವಿಮಾನದ ವ್ಯವಸ್ಥೆ ಕಲ್ಪಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!