ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದ ನಾಗೌರ್‌ನ ಮೆರ್ಟಾ ಪ್ರದೇಶದಲ್ಲಿ ಭಾರತೀಯ ವಾಯುಪಡೆಯ(ಐಎಎಫ್) ಹೆಲಿಕಾಪ್ಟರ್ ಬುಧವಾರ ತಾಂತ್ರಿಕ ದೋಷಕ್ಕೆ ತುತ್ತಾಗಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾಸ್ ನಗರದ ಜಮೀನಿನಲ್ಲಿ ಹೆಲಿಕಾಪ್ಟರ್ ಇಳಿಯಿತು. ಯಾವುದೇ ಪ್ರಾಣ ಹಾನಿ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಐಎಎಫ್ ಹೆಲಿಕಾಪ್ಟರ್‌ಗಳು ಜೋಧ್‌ಪುರದಿಂದ ಜೈಪುರಕ್ಕೆ ಹೋಗುತ್ತಿದ್ದಾಗ ಪೈಲಟ್ ಗಳಲ್ಲಿ ಒಬ್ಬರು ಕೆಲವು ಸಮಸ್ಯೆಗಳನ್ನು ಗಮನಿಸಿದ್ದು, ಇದರಿಂದಾಗಿ ಹೆಲಿಕಾಪ್ಟರ್ ಲ್ಯಾಂಡ್ ಆಗಬೇಕಾಯಿತು.ಸಮಸ್ಯೆಯನ್ನು ಸರಿಪಡಿಸಿದ ನಂತರ, ಹೆಲಿಕಾಪ್ಟರ್ ಮತ್ತೆ ಟೇಕ್ ಆಫ್ ಆಗಿದೆ.