Monday, September 25, 2023

Latest Posts

ದುಬೈ ಹೊರಟ ಮಮತಾ ಬ್ಯಾನರ್ಜಿ ವಿಮಾನದಲ್ಲಿ ತಾಂತ್ರಿಕ ದೋಷ: ಸಂಚಾರ ಮೂರು ಗಂಟೆ ವಿಳಂಬ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ದುಬೈಗೆ ತೆರಳಬೇಕಿದ್ದ ವಿಮಾನವೂ ತಾಂತ್ರಿಕ ಕಾರಣಗಳಿಂದಾಗಿ ಮೂರು ಗಂಟೆ ವಿಳಂಬಗೊಂಡಿದೆ .

ಪಶ್ಚಿಮ ಬಂಗಾಳಕ್ಕೆ ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅವರು ವಾಣಿಜ್ಯ ಶೃಂಗಸಭೆಯಲ್ಲಿ ಭಾಗಿಯಾಗುವ ಉದ್ದೇಶದಿಂದ ವಿದೇಶ ಪ್ರವಾಸ ನಡೆಸಿದ್ದರು, ದುಬೈ ಮತ್ತು ಸ್ಪೇನ್​ಗೆ 12 ದಿನದ ಪ್ರವಾಸ ನಡೆಸುವ ಉದ್ದೇಶದಿಂದ ಅವರು ಇಂದು ಬೆಳಗ್ಗೆ 8.30ಕ್ಕೆ ನೇತಾಜಿ ಸುಭಾಷ್​ ಚಂದ್ರ ಬೋಸ್​ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಪ್ರಯಾಣ ನಡೆಸಬೇಕಿತ್ತು.

ಆದ್ರೆ ತಾಂತ್ರಿಕ ಕಾರಣದಿಂದಾಗಿ ವಿಮಾನ ಮೂರು ಗಂಟೆ ವಿಳಂಬವಾಗಿದೆ. ಮುಖ್ಯಮಂತ್ರಿಗಳು ಇಂದು ರಾತ್ರಿ ದುಬೈಗೆ ಪ್ರಯಾಣ ನಡೆಸಬೇಕಿತ್ತು. ಅಲ್ಲಿಂದ ಅಂದರೆ ದುಬೈನಿಂದು ಬುಧವಾರ ಅವರು ಸ್ಪೇನ್​ ರಾಜಧಾನಿ ಮ್ಯಾಡ್ರಿಡ್​​ಗೆ ಪ್ರಯಾಣ ನಡೆಸಬೇಕಿತು. ಇದೀಗ ವಿಮಾನ ವಿಳಂಬದಿಂದಾಗಿ ಸ್ಪೇನ್​ಗೆ ಸಂಪರ್ಕಿಸುವ ವಿಮಾನದ ಲಭ್ಯತೆ ಇಲ್ಲದ ಕಾರಣ ಇದೀಗ ಅವರು ದುಬೈನಲ್ಲಿ ಒಂದು ದಿನ ಕಳೆಯಬೇಕಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!