ತಂತ್ರಜ್ಞಾನ ನವೋದ್ದಿಮೆಗಳು ಭಾರತ ಭವಿಷ್ಯದ ಆರ್ಥಿಕತೆಯನ್ನು ಬಲಗೊಳಿಸಲಿವೆ: ಸಚಿವ ಜಿತೇಂದ್ರ ಸಿಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯರು ಮೇಲುಗೈ ಸಾಧಿಸಿದ್ದು ಭಾರತದ ನವೀನ ತಂತ್ರಜ್ಞಾನ ನವೋದ್ದಿಮೆಗಳು ಭವಿಷ್ಯದಲ್ಲಿ ದೇಶದ ಆರ್ಥಿಕೆ ಪ್ರಮುಖ ಕೊಡುಗೆ ನೀಡಲಿವೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಭಾರತದ ಜಿಯೋಸ್ಪೇಷಿಯಲ್ ಪರಿಸರ ವ್ಯವಸ್ಥೆಯಲ್ಲಿ ನಾವೀನ್ಯತೆ ಮತ್ತು ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ಜಿಯೋಸ್ಪೇಷಿಯಲ್ ಹ್ಯಾಕಥಾನ್‌ಗೆ ಚಾಲನೆ ನೀಡಿದ ಅವರು ಹೊಸ ಉದಯೋನ್ಮುಖ ತಂತ್ರಜ್ಞಾನಗಳಲ್ಲಿನ ಸ್ಟಾರ್ಟ್‌ಅಪ್‌ಗಳು ಭಾರತದ ಭವಿಷ್ಯದ ಆರ್ಥಿಕತೆಗೆ ಪ್ರಮುಖವಾಗಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅವರು ಆಡಿದ ಮಾತುಗಳು ಹೀಗಿವೆ. “ನಮ್ಮ ಜನಸಂಖ್ಯೆಯ ಅರ್ಧದಷ್ಟು ಜನರು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಮತ್ತು ಬಹಳ ಮಹತ್ವಾಕಾಂಕ್ಷೆಯುಳ್ಳವರಾಗಿದ್ದಾರೆ. 2022ರಲ್ಲಿ 100ನೇ ಯುನಿಕಾರ್ನ್ನ ಸ್ಥಾಪಿಸುವ ಮೂಲಕ ಭಾರತದ ನವೋದ್ದಿಮೆ ಕ್ಷೇತ್ರವು ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ ಭಾರತವು ಭೌಗೋಳಿಕ ಕ್ರಾಂತಿಯ ತುದಿಯಲ್ಲಿದೆ. ಸರ್ಕಾರ ಮತ್ತು ಉದ್ದಿಮೆಗಳ ನಡುವಿನ ಆರೋಗ್ಯಕರ ಸಂಬಂಧವು ಆರ್ಥಿಕ ಉತ್ಪಾದನೆಯನ್ನು ಮಹತ್ತರವಾಗಿ ಹೆಚ್ಚಿಸಲಿದೆ. 2030ರ ಹೊತ್ತಿಗೆ ಭಾರತವು 10 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಲು ಇವು ಕೊಡುಗೆ ನೀಡಲಿವೆ. ಪ್ರಸ್ತುತ ಚಾಲನೆಗೊಂಡಿರುವ ಹ್ಯಾಕಥಾನ್‌ ಭಾರತದ ತಂತ್ರಜ್ಞಾನ ಆರ್ಥಿಕತೆಯಗೆ ಉತ್ತೇಜನ ನೀಡಲಿದ್ದು ಭವಿಷ್ಯದಲ್ಲಿ ಭಾರತವನ್ನು ಜಗತ್ತಿನ ತಂತ್ರಜ್ಞಾನ ಕ್ಷೇತ್ರದಲ್ಲಿ ನಾಯಕನನ್ನಾಗಿಸಲು ಸಹಾಯಕವಾಗಲಿದೆ” ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!