ಪ್ರವೀಣ್ ನೆಟ್ಟಾರು ಮನೆಗೆ ತೇಜಸ್ವಿ ಸೂರ್ಯ ಭೇಟಿ: ಬಿಜೆಪಿ ಯುವ ಮೋರ್ಚಾದಿಂದ 15 ಲಕ್ಷ ರೂ. ನೆರವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಪ್ರವೀಣ್ ನೆಟ್ಟಾರು ಮನೆಗೆ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಪ್ರವೀಣ್ ಈ ಭಾಗದಲ್ಲಿ ಬೆಳೆಯುತ್ತಿದ್ದ ನಾಯಕ. ಪ್ರವೀಣ್‍ನನ್ನು ಕಳೆದುಕೊಂಡದ್ದು ತುಂಬಲಾರದ ನಷ್ಟವಾಗಿದೆ. ಈ ರೀತಿಯ ಸಾವು ಮರುಕಳಿಸದಂತೆ ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆ.

ಯುವ ಮೋರ್ಚಾ 15 ಲಕ್ಷ ರೂ. ನೀಡುತ್ತದೆ. ಕುಟುಂಬಕ್ಕೆ ಬಿಜೆಪಿ ಮನೆ ಕಟ್ಟಿಸಿ ಕೊಡುತ್ತದೆ. ಪಕ್ಷ 25 ಲಕ್ಷ ರೂ. ನೀಡಿದೆ. ಸಮಸ್ತ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು. ಇಸ್ಲಾಮೀ ಜಿಹಾದ್‍ನ್ನು ಮೂಲದಿಂದ ಉಚ್ಚಾಟನೆ ಮಾಡೋದಕ್ಕೆ ನಾವು ಬದ್ಧ ಎಂದು ಹೇಳಿದರು.

ಜಿಹಾದಿ ಮನಸ್ಥಿತಿ ಯಾವ ಮಟ್ಟದಲ್ಲಿದೆ ಅನ್ನೋದು ಗೊತ್ತಾಗುತ್ತೆ. ಬಿಜೆಪಿಯ ಕಾರ್ಯಕರ್ತರು ಧೃತಿಗೆಡಬೇಡಿ. ವಿವೇಕಾನಂದರು , ನಾರಾಯಣ ಗುರು, ಶಿವಾಜಿಯ ಕ್ಷಾತ್ರ ರಕ್ತ ನಮ್ಮಲ್ಲಿದೆ. ಬಿಜೆಪಿ ಕಾರ್ಯಕರ್ತರ ಸಿಟ್ಟು ಕಾಂಗ್ರೆಸ್, ಜೆಡಿಎಸ್‍ಗೆ ಲಾಭವಾಗುತ್ತೆ ಎಂದು ಕೆಕೇ ಹಾಕುತ್ತಿದ್ದಾರೆ. ನಮ್ಮ ಕಾರ್ಯಕರ್ತರ ಆಕ್ರೋಶ ನಮಗೆ ನಷ್ಟವಾಗಲ್ಲ. ನಮ್ಮ ಕಾರ್ಯಕರ್ತರು ಸಿದ್ಧಾಂತ ಬಿಡೋದಿಲ್ಲ ನಮ್ಮ ನಿಷ್ಟೆ ಪ್ರಶ್ನಾತೀತವಾಗಿದೆ. ಸರ್ಕಾರ ಎಲ್ಲ ರೀತಿಯ ಕ್ರಮಕೈಗೊಳ್ಳುತ್ತೆ. ಮೂಲಭೂತವಾದಿ ಸಿದ್ಧಾಂತದ ವಿರುದ್ಧ ಎಚ್ಚೆತ್ತು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಪ್ರವೀಣ್ ಸಾವು ಆಗಬಾರದಿತ್ತು. ಪ್ರತಿ ಬಾರಿ ಕಾರ್ಯಕರ್ತರನ್ನು ಬೀಳ್ಕೊಟ್ಟಾಗಲೂ ಈ ಮಾತು ಹೇಳುತ್ತೇವೆ. ಈ ಬಾರಿ ಇಡೀ ರಾಜ್ಯ, ದೇಶ ಎಚ್ಚೆತ್ತಿದೆ. ಈಗಾಗಲೇ ಇಬ್ಬರ ಬಂಧನವಾಗಿದೆ. ಪ್ರವೀಣ್ ಅವರ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿಯ ಮಗನೇ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಇದು ಅತ್ಯಂತ ಬೇಸರ ಸಂಗತಿಯಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!