ಸ್ವೀರ್ಟ್‌ ಕಾರ್ನ್‌ ಪರೋಟಾ ಎಂದಾದರೂ ತಿಂದಿದ್ದೀರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಪದಾರ್ಥಗಳು:

1 ಕಪ್ ಸಿಹಿ ಕಾರ್ನ್, 3 ಹಸಿರು ಮೆಣಸಿನಕಾಯಿ.
ಉಪ್ಪು, ಕೊತ್ತಂಬರಿ ಸೊಪ್ಪು, 1/4 ಟೀಸ್ಪೂನ್ ಸೋಂಪು
ಶುಂಠಿ, ಬೆಳ್ಳುಳ್ಳಿ, ಈರುಳ್ಳಿ,
ಎಣ್ಣೆ, 1/2 ಟೀಸ್ಪೂನ್ ಜೀರಿಗೆ
ಇಂಗು, 1 ಟೀಸ್ಪೂನ್ ನಿಂಬೆ ರಸ,
2 ಕಪ್ ಗೋಧಿ ಹಿಟ್ಟು,

ಮಾಡುವ ವಿಧಾನ: 

ಮೊದಲಿಗೆ ಒಂದು ಮಿಕ್ಸಿಂಗ್‌ ಬೌಲ್‌ಗೆ 2ಕಪ್‌ ಗೋಧಿ ಹಿಟ್ಟು, ಸ್ವಲ್ಪ ಉಪ್ಪು ಎರಡು ಟೀಸ್ಪೂನ್‌ ಎಣ್ಣೆಹಾಕಿ ಮಿಕ್ಸ್‌ ಮಾಡಿ. ಅಗತ್ಯವಿದ್ದಷ್ಟು ನೀರು ಹಾಕಿ ಹದವಾಗಿ ಹಿಟ್ಟನ್ನು ಕಲಸಿ ಮೇಲೆ ಸ್ವಲ್ಪ ಎಣ್ಣೆ ಸವರಿ ಅರ್ಧ ಅಥವಾ ಒಂದು ಗಂಟೆ ಕಾಲ ಪಕ್ಕಕ್ಕಿಡಿ. ಮಿಕ್ಸಿ ಜಾರಿಗ ಸ್ವೀಟ್‌ ಕಾರ್ನ್‌, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಹಾಕಿ ಪೇಸ್ಟ್‌ ಮಾಡಿಕೊಳ್ಳಿ. ಬಳಿಕ ಒಂದು ಬಾಣಲೆಗೆ ಎಣ್ಣೆ ಹಾಕಿ ಜೀರಿಗೆ, ಶುಂಠಿ, ಬೆಳ್ಳುಳ್ಳಿ ಈರುಳ್ಳಿ ಸಣ್ಣಗೆ ಕತ್ತರಿಸಿ ಹಾಕಿ ಸ್ವಲ್ಪ ಇಂಗು ಸೇರಿಸಿ ಮೆತ್ತಗಾಗುವ ಹಾಗೆ ಬಾಡಿಸಿ ಬಳಿಕ ಮಿಕ್ಸಿ ಮಾಡಿದ ಮಿಶ್ರಣ ಹಾಕಿ ನೀರಿನಾಂಶ ಹೀರಿ ಗಟ್ಟಿಯಾಗುವವರೆಗೆ ತಿರುವುತ್ತಾ ಬೇಯಿಸಿ. ಮುದ್ದೆಯಂತಾದ ಮೇಲೆ ಕೆಳಗಿಳಿಸಿ ತಣಿಸಿ.

ಇತ್ತ ಗೋಧಿ ಹಿಟ್ಟನ್ನ ಸಣ್ಣ ಉಂಡೆಗಳನ್ನಾಗಿ ಮಾಡಿ ಅದಕ್ಕೆ ಈ ಮಿಶ್ರಣವನ್ನು ತುಂಬಿ ಭಾರ ಹಾಕದೆ ಚಪಾತಿ ಲಟ್ಟಿಸಿದ ಹಾಗೆ ಲಟ್ಟಿಸಿ ಕಾವಲಿ ಮೇಲೆ ಎಣ್ಣೆ ಹಾಕಿ ಬೇಯಿಸಿದರೆ ಸ್ವೀಟ್‌ ಕಾರ್ನ್‌ ಪರೋಟಾ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here