Sunday, March 26, 2023

Latest Posts

ಅತ್ಯುತ್ತಮ ಸಂಸದ ಪ್ರಶಸ್ತಿಗೆ ತೇಜಸ್ವೀ ಸೂರ್ಯ ಆಯ್ಕೆ

ಹೊಸದಿಗಂತ ವರದಿ ಹೊಸದಿಲ್ಲಿ:
ಪ್ರಥಮ ಬಾರಿಗೆ ಸಂಸದರಾಗಿ ಗಣನೀಯ ಸೇವೆ ಸಲ್ಲಿಸುವ ಅತ್ಯುತ್ತಮ ಸಂಸದರಿಗೆ ನೀಡಲಾಗುವ ಪ್ರಶಸ್ತಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ರವರು, ಚೊಚ್ಚಲ ಬಾರಿಗೆ ಆಯ್ಕೆಯಾಗಿದ್ದಾರೆ.
ಉತ್ತಮ ಸೇವೆ ಸಲ್ಲಿಸಿರುವ ಸಂಸದರಿಗೆ ನೀಡಲಾಗುವ  ಲೋಕಮತ್ ಸಂಸದೀಯ ಪ್ರಶಸ್ತಿ – 2022, (4ನೆ ಆವೃತ್ತಿ)ಯಲ್ಲಿ, ಅತ್ಯುತ್ತಮ ಸಂಸದ  ಪ್ರಶಸ್ತಿಗೆ ತೇಜಸ್ವಿ ಸೂರ್ಯ ಭಾಜನರಾಗಿದ್ದಾರೆ. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

17 ನೇ ಲೋಕಸಭಾ ಅವಧಿಯ ಎರಡನೇ ಅತೀ ಕಿರಿಯ ಸಂಸದರಾಗಿ ಆಯ್ಕೆಯಾಗಿರುವ ತೇಜಸ್ವೀ ಸೂರ್ಯ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಅನೇಕ ವಿಷಯಗಳನ್ನು ಸಂಸತ್ತಿನಲ್ಲಿ ಹಾಗೂ ಮಾಹಿತಿ ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರಾಗಿ  ದತ್ತಾಂಶ ಸುರಕ್ಷತೆ ಬಗ್ಗೆ, ವೈಯುಕ್ತಿಕ ದತ್ತಾಂಶ ಸುರಕ್ಷತೆ ಮಸೂದೆಯ ಜಂಟಿ ಸ್ಥಾಯಿ ಸಮಿತಿ ಸದಸ್ಯರಾಗಿ ನೀತಿ ನಿಯಮಾವಳಿಗಳ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

2019ರ ಜೂನ್ 17 ರಂದು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ರಾಷ್ಟ್ರೀಯ, ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಸಂಸತ್ತಿನ 26 ಚರ್ಚೆಗಳಲ್ಲಿ ಧ್ವನಿ ಎತ್ತಿದ್ದು, ಎಲ್ಲ ಅಧಿವೇಶನಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡು ಸಂಸತ್ತಿನಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ. 17ನೆ ಲೋಕಸಭೆಯಲ್ಲಿ ಎಲ್ಲ ವಲಯಗಳ ಮೇಲಿನ, ರಾಷ್ಟ್ರೀಯ & ಅಂತಾರಾಷ್ಟ್ರೀಯ ಹಿತಾಸಕ್ತಿಯ 308 ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಕೇಳಿದ್ದು ( ಕೃಷಿ, ಶಿಕ್ಷಣ,ವಿಮಾನಯಾನ, ರೇಲ್ವೆ, ಐಟಿ, ಬಿಟಿ, ಅಂತರಿಕ್ಷ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ) ಈ ಕುರಿತು ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಹಿಂದಿನ ಆವೃತ್ತಿಗಳಲ್ಲಿ ಪ್ರಶಸ್ತಿ ಸ್ವೀಕರಿಸಿದವರಲ್ಲಿ ಡಾ. ಭಾರತಿ ಪ್ರವೀಣ್ ಪವಾರ್, ಶ್ರೀಮತಿ ಮೀನಾಕ್ಷಿ ಲೇಖಿ ( ಉದಯೋನ್ಮುಖ ಮಹಿಳಾ ಸಂಸದೆ) ಹಾಗೂ ಶ್ರೀ ನಿಶಿಕಾಂತ್ ದುಬೇ ಪ್ರಮುಖರು. ಶ್ರೀ ಡೆರೆಕ್ ಓ ಬ್ರಿಯಾನ್ ಉತ್ತಮ ಸಂಸದ, ಶ್ರೀ ಭಾರ್ತ್ರು ಹರಿ ಮಹ್ತಾಬ್ ಜೀವಮಾನ ಸಾಧನೆ ಪ್ರಶಸ್ತಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!