ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ತೇಜಸ್ವಿ ಪ್ರಕಾಶ್ ಈ ಬಾರಿ ಬಿಗ್ಬಾಸ್ ಸೀಸನ್ 15 ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಈ ಬಾರಿ ಬಿಗ್ಬಾಸ್ನಲ್ಲಿ ಎಲ್ಲ ಕಂಟೆಸ್ಟೆಂಟ್ಗಳು ವಿನ್ನಿಂಗ್ ಕ್ಯಾಂಡಿಡೇಟ್ಸ್ ರೀತಿಯೇ ಕಾಣುತ್ತಿದ್ದು, ಯಾರು ಗೆಲ್ಲುತ್ತಾರೆ ಎಂದು ಯಾರೂ ಊಹೆ ಮಾಡಲು ಸಾಧ್ಯ ಆಗಿರಲಿಲ್ಲ.
ತೇಜಸ್ವಿ ವಿನ್ ಆಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಈ ಬಾರಿ ವಿನ್ನರ್ ಎಂದು ಎಲ್ಲೆಡೆ ಸುದ್ದಿ ಹರಿದಾಡಿತ್ತು. ಆದರೆ ಶಮಿತಾ ರನ್ನರ್ಅಪ್ ಸ್ಥಾನ ಕೂಡ ಪಡೆಯಲಿಲ್ಲ. ಪ್ರತೀಕ್ ಸೆಹಜ್ಪಾಲ್ ರನ್ನರ್ ಅಪ್ ಆಗಿದ್ದಾರೆ. ತೇಜಸ್ವಿ ಬರೋಬ್ಬರಿ 40 ಲಕ್ಷ ರೂ. ಬಹುಮಾನದ ಮೊತ್ತ ಪಡೆದಿದ್ದಾರೆ. ನಿನ್ನೆ ಫಿನಾಲೆ ಕಾರ್ಯಕ್ರಮ ನಡೆದಿದ್ದು, ಕಡೆಯವರೆಗೂ ಯಾರು ವಿನ್ನರ್ ಎನ್ನುವ ಕುತೂಹಲ ಎಲ್ಲರಿಗೂ ಇತ್ತು.
ಕಡೆಗೂ ಸಲ್ಮಾನ್ ತೇಜಸ್ವಿ ಕೈ ಎತ್ತಿ ವಿನ್ನರ್ ಎಂದು ಘೋಷಿಸಿದಾಗ ತೇಜಸ್ವಿ ಕುಟುಂಬದವರು, ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರೆ.