ಫುಟ್‌ಪಾತ್‌ನಲ್ಲಿ ಕುಳಿತಿದ್ದ ನಾಲ್ವರು ಮಹಿಳೆಯರ ಮೇಲೆ ಹರಿದ ಕಾರು: ಗಾಡಿ ಓಡಿಸಿದ್ದು 9 ನೇ ತರಗತಿ ವಿದ್ಯಾರ್ಥಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣದಲ್ಲಿ ಕರೀಂ ನಗರದಲ್ಲಿ ಬಾಲಕ ವಾಹನ ಚಾಲನೆ ಮಾಡಿದ್ದು, ಈತನಿಂದ ನಾಲ್ವರು ಮಹಿಳೆಯರ ಪ್ರಾಣ ಹೋಗಿದೆ. ಅತ್ಯಂತ ವೇಗವಾಗಿ ಕಾರು ಓಡಿಸುತ್ತಿದ್ದ ಬಾಲಕ, ಕಾರ್‌ನ್ನು ಫುಟ್‌ಪಾತ್ ಮೇಲೆ ಹರಿಸಿದ್ದು, ಫುಟ್‌ಪಾತ್‌ನಲ್ಲಿ ಕುಳಿತಿದ್ದ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ.

ಮೂವರು ಅಪ್ರಾಪ್ತರು ಕಾರಿನಲ್ಲಿದ್ದು, ಒಬ್ಬಾತ ಗಾಡಿ ಓಡಿಸುತ್ತಿದ್ದ. ಬೆಳಗಿನ ಜಾವ ಅಪಘಾತ ಸಂಭವಿಸಿದ್ದು. ದಟ್ಟ ಮಂಜು ಆವರಿಸಿದೆ. ಈ ವೇಳೆ ಕಣ್ಣು ಉಜ್ಜಿಕೊಳ್ಳಲು ಸ್ಟೇರಿಂಗ್‌ನಿಂದ ಡ್ರೈವ್ ಮಾಡುತ್ತಿದ್ದಾಗ ಕೈ ತೆಗೆದಿದ್ದು, ಈ ವೇಳೆ ನಿಯಂತ್ರಣ ತಪ್ಪಿದ್ದಾನೆ. ಒಂಬತ್ತನೇ ತರಗತಿ ಬಾಲಕ ಬ್ರೇಕ್ ಬದಲಿಗೆ ಆಕ್ಸಿಲೇಟರ್ ಒತ್ತಿದ್ದು, ನಾಲ್ವರ ಪ್ರಾಣ ಸ್ಥಳದಲ್ಲೇ ಹೋಗಿದೆ. ಇನ್ನು ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತವಾಗುತ್ತಿದ್ದಂತೆಯೇ ಎಲ್ಲರೂ ಓಡಿಹೋಗಲು ಯತ್ನಿಸಿದ್ದು, ಸ್ಥಳೀಯರು ಬಾಲಕರನ್ನು ಹಿಡಿದಿದ್ದಾರೆ. ಬಾಲಕರ ವಿರುದ್ಧ ಹಾಗೂ ಕಾರು ಚಲಾಯಿಸುತ್ತಿದ್ದ ಬಾಲಕನ ತಂದೆ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!