ಪ್ರೋತ್ಸಾಹ ಧನದಿಂದಲೇ ಓದಿ 9 ಚಿನ್ನದ ಪದಕ, 10 ನಗದು ಬಹುಮಾನ ಬಾಚಿಕೊಂಡ ತೇಜಸ್ವಿನಿ!

ಹೊಸದಿಗಂತ ವರದಿ, ಮೈಸೂರು:

ಆಕೆಗೆ ತಂದೆ ತಾಯಿ ಇಲ್ಲ, ಅತ್ತೆ ಮನೆಯಲ್ಲಿದ್ದುಕೊಂಡು, ಪ್ರೋತ್ಸಾಹ ಧನದಿಂದಲೇ ಕಷ್ಟ ಪಟ್ಟು ಛಲಗಾತಿ ಓದಿದಕ್ಕೆ ರ‍್ಯಾಂಕ್ ಬಂದಿದೆ. ಬರೋ ಬರೀ 9 ಚಿನ್ನದ ಪದಕ, 10 ನಗದು ಬಹುಮಾನವನ್ನು ಬಾಚಿಕೊಂಡಿದ್ದಾಳೆ. ಆದರೆ ಅದರ ಸಂಭ್ರಮ ಪಡುವುದಕ್ಕೆ ಯಾಕೆಯೊಂದಿಗೆ ಯಾರೂ ಇರಲಿಲ್ಲ. ಒಂದೆಡೆ ಅತಿ ಹೆಚ್ಚು ಚಿನ್ನದ ಪದಕ, ನಗದು ಬಹುಮಾನ ಪಡೆದ ಸಂತಸವಾದರೆ, ಅದನ್ನು ಹಂಚಿಕೊಳ್ಳಲು ನನ್ನವರು ಅಂತ ಯಾರೂ ಇಲ್ಲಿ ಇಲ್ಲವಲ್ಲ ಎಂಬ ನೋವು ಆಕೆಯನ್ನು ಕಾಡುತ್ತಿತ್ತು.
ಈ ರೀತಿಯ ಭಾವುಕ, ನೋವಿನ ಸನ್ನಿವೇಶದಲ್ಲಿ ಚಿನ್ನದ ಪದಕದೊಂದಿಗೆ ಮೈಸೂರು ವಿವಿಯ ಆವರಣದಲ್ಲಿ ನಿಂತಿದ್ದಾಕೆಯ ಹೆಸರು ತೇಜಸ್ವನಿ. ಬಿಎಯಲ್ಲಿ ಆಕೆ ರ‍್ಯಾಂಕ್ ವಿದ್ಯಾರ್ಥಿನಿ. ಮಂಗಳವಾರ ಮೈಸೂರು ವಿವಿಯ ಕ್ರಾಫರ್ಡ್ ಭವನದಲ್ಲಿ ಚಿನ್ನದ ಪದಕ ಹಾಗೂ ನಗದು ಬಹುಮಾನವನ್ನು ಸ್ವೀಕರಿಸಿದ ಆಕೆ ಒಂಟಿಯಾಗಿಯೇ ನಿಂತಿದ್ದಳು. ಆಕೆಯನ್ನು ಸುದ್ದಿಗಾರರು ಮಾತನಾಡಿಸಿದಾಗ ಆಕೆ ಕಣ್ಣಂಚಿನಲ್ಲಿ, ಮುಖದಲ್ಲಿ ನೋವಿರಲಿಲ್ಲ. ಬದಲಾಗಿ ನೋವು, ನಿರಾಶೆ, ಬೇಸರವೇ ತುಂಬಿಕೊAಡಿತ್ತು. ಪದವಿ ಸ್ವೀಕರಿಸಿದವರೆಲ್ಲಾ ತಮ್ಮ ಬಂಧು, ಬಳಗ, ಪೋಷಕರೊಂದಿಗೆ ಪೋಟೋ ತೆಗೆದುಕೊಂಡು ಸಂಭ್ರಮಿಸುತ್ತಿದ್ದರೆ, ಆಕೆ ಮಾತ್ರ ಅಯ್ಯೋ ತನ್ನೊಂದಿಗೆ ಯಾರು ಇಲ್ಲವಲ್ಲ ಎಂದು ಮನದಲ್ಲಿಯೇ ನೋವಿನಿಂದ ಅಳುತ್ತಿದ್ದಳು. ತೇಜಸ್ವಿನಿ ಬಾಲಕಿಯಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದಳು. ಕಳೆದ ಐದು ವರ್ಷಗಳ ಹಿಂದೆ ತನ್ನನ್ನು ಸಾಕು ಸಲುಹಿದ ತಂದೆಯನ್ನೂ ಕಳೆದುಕೊಂಡಳು. ಬಟ್ಟೆ ವ್ಯಾಪಾರಿಯಾಗಿದ್ದ ನನ್ನ ತಂದೆ, ನೀನು ಚೆನ್ನಾಗಿ ಓದು, ಒಳ್ಳೆಯ ಅಧಿಕಾರಿಯಾಗ, ಒಳ್ಳೆಯ ಆಡಳಿತ ನೀಡಿ, ಹೆಸರು ಮಾಡಬೇಕು, ಯಾವುದೇ ಕಾರಣಕ್ಕೂ ನೀನು ಓದು ನಿಲ್ಲಿಸಬಾರದು. ತುಂಬಾ ಓದಿದರನೇ ನಿನ್ನ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿ ಪ್ರೋತ್ಸಾಹಿಸುತ್ತಿದ್ದ ನನ್ನ ತಂದೆ, ನಾನು ಮಾಡಿರುವ ಈ ಸಾಧನೆ, ಪಡೆದಿರುವ ಚಿನ್ನದ ಪದಕವನ್ನು ನೋಡಿ ಸಂಭ್ರಮಿಸಲು ಇಲ್ಲವಲ್ಲ ಎಂದು ಕಣ್ಣೀರು ಹಾಕಿದಳು.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ನಿವಾಸಿಯಾದ ವೆಂಕಟೇಶ್ ಹಾಗೂ ನಾಗಮ್ಮ ದಂಪತಿಯ ಪುತ್ರಿಯಾದ ತೇಜಸ್ವಿನಿ, ತಂದೆ ಕಳೆದುಕೊಂಡ ಬಳಿಕ ಮಂಡ್ಯದ ಮಳವಳ್ಳಿಯ ಸರ್ಕಾರಿ ಶಾಲೆಯಲ್ಲಿ ಪಿಯುಸಿಯನ್ನು ಓದಿದಳು. 2018ನೇ ಸಾಲಿನಲ್ಲಿ 566 ಅಂಕಗಳನ್ನು ಗಳಿಸುವ ಮೂಲಕ ಮಂಡ್ಯ ಜಿಲ್ಲೆಗೆ ಫಸ್ಟ್ ರ‍್ಯಾಂಕ್ ಬಂದಳು. ಆದರೆ ಮುಂದೆ ಓದುವುದಕ್ಕೆ ಆಕೆಗೆ ಯಾರೂ ಸಹಾಯ ಮಾಡಲು ಮುಂದೆ ಬರಲಿಲ್ಲ, ಆಗ ಶಾಲೆಯ ಶಿಕ್ಷಕರು ಆಕೆಗೆ ಓದಿನಲ್ಲಿರುವ ಆಸಕ್ತಿ, ಪ್ರತಿಭೆಯನ್ನು ಗುರುತಿಸಿ, ಎಲ್ಲರೂ ಹಣವನ್ನು ಹಾಕಿ, ಪ್ರೋತ್ಸಾಹ ಧನ ನೀಡಿದರಲ್ಲದೆ, ಮೈಸೂರಿನ ಮಹಾರಾಣಿ ಕಾಲೇಜಿಗೆ ಕರೆ ತಂದು ದಾಖಲಿಸಿದರು. ಹಾಗಾಗಿ ಮೈಸೂರಿನಲ್ಲಿರುವ ಅತ್ತೆ ಮನೆಯಲ್ಲಿಯೇ ಆಶ್ರಯ ಪಡೆದ ತೇಜಸ್ವಿನಿ ಕಷ್ಟ ಪಟ್ಟು ಓದಿದ ಪರಿಣಾಮ ಈಗ ಚಿನ್ನದ ಪದಕಗಳನ್ನು, ನಗದು ಬಹುಮಾನವನ್ನು ಪಡೆದು ಸಾಧನೆ ಮಾಡಿದ್ದಾಳೆ. ಅದನ್ನು ತನ್ನ ತಂದೆ-ತಾಯಿಗೆ ಅರ್ಪಿಸಿದ್ದಾಳೆ. ಆದರೆ ಮುಂದೆ ಓದಬೇಕನ್ನುವ ಆಕೆಯ ಆಸೆಗೆ ಬಡತನ ಅಡ್ಡಿಯಾಗುತ್ತಿದೆ. ಸತ್ತೇಗಾಲದಲ್ಲಿ ಅಪ್ಪನ ಆಸ್ತಿ ಎಂದು ಇರುವುದು ಒಂದು ಹಳೇ ಮನೆ ಮಾತ್ರ. ಅಪ್ಪನ ಆಸೆಯಂತೆ ಆಕೆಗೆ ಐಎಎಸ್ ಮಾಡಿ, ಉತ್ತಮ ಅಧಿಕಾರಿಯಾಗುವ ಹಂಬಲ, ಆದರೆ ಅಲ್ಲಿಯ ತನಕ ತನಗೆ ಓದಿಸುವವರು ಯಾರು ಎಂದು ತಿಳಿಯದೆ ಕಂಗಳಾಗಿದ್ದಾಳೆ. ಮುಂದೇನು ಮಾಡಬೇಕೆಂದು ತೋಚದೆ ನಿಂತಿದ್ದಾಳೆ. ಆಕೆಯ ಓದಿಗೆ ದಾನಿಗಳ ನೆರವು ತುಂಬಾನೇ ಅಗತ್ಯವಾಗಿದೆ.
ಈಕೆಗೆ ನೆರವಾಗಲು ಇಚ್ಚಿಸುವವರು ಮೊ.ನಂ 9611366952ನ್ನು ಸಂಪರ್ಕಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!