September 28, 2026
Monday, September 28, 2026
spot_img

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆಲಂಗಾಣ ಸಾರಿಗೆ ಸಚಿವ ಪೊನ್ನಮ್ ಪ್ರಭಾಕರ ಭೇಟಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣ ರಾಜ್ಯ ಸರಕಾರದ ಸಾರಿಗೆ ಸಚಿವ ಪೊನ್ನಮ್ ಪ್ರಭಾಕರ ಅವರು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಅವರನ್ನು ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಸ್ವಾಗತಿಸಿದರು.

ಹೊಸಳಿಗಮ್ಮನ ದರುಶನ ಪಡೆದ ಸಚಿವರು

ಬಳಿಕ ಶ್ರೀ ದೇವಳಕ್ಕೆ ತೆರಳಿದ ಸಚಿವರು ಶ್ರೀ ದೇವರ ದರುಶನ ಮಾಡಿದರು. ಅರ್ಚಕರು ಶಾಲು ಹೊದಿಸಿ ಮಹಾಪ್ರಸಾದ ನೀಡಿದರು. ಬಳಿಕ ಅವರು ಹೊಸಳಿಗಮ್ಮನ ದರುಶನ ಮಾಡಿದರು.

ನಂತರ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್ ಇಂಜಾಡಿ ಸಚಿವರನ್ನು ಭೇಟಿಯಾಗಿ ಗೌರವಿಸಿದರು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಸದಸ್ಯೆ ಲೀಲಾ ಮನಮೋಹನ್, ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್. ಎಸ್ ಉಪಸ್ಥಿತರಿದ್ದರು.

Must Read