ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ಕೂಡ ಪಲ್ಲಕ್ಕಿ ಬಸ್ನಲ್ಲಿ ಕುಳಿತಿದ್ದೇನೆ, ಮಲಗಿ ಕೂಡ ನೋಡಿದ್ದೇನೆ, ಉದ್ದ ಎಲ್ಲ ಸರಿಯಾಗಿದೆ, ನನ್ನ ಹೆಂಡತಿಗೂ ಪಲ್ಲಕ್ಕಿ ಬಸ್ನಲ್ಲೇ ಮೈಸೂರಿಗೆ ಹೋಗೋಕೆ ಹೇಳಿದ್ದೀನಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ನಡೆದ ಬಸ್ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ್ದು,ಇಡೀ ದೇಶದಲ್ಲೇ ನಮ್ಮ ರಾಜ್ಯದ ಸಾರಿಗೆ ಮಾದರಿಯಾಗಿದೆ. ನೂತನ ಬಸ್ಗೆ ಪಲ್ಲಕ್ಕಿ ಎಂದು ಹೆಸರಿಟ್ಟಿರುವ ಸಚಿವರಿಗೆ ಅಭಿನಂದನೆಗಳು. ಪ್ರತಿ ಮನೆಯ ಮಹರಾಣಿಯರು ಪಲ್ಲಕ್ಕಿಯಲ್ಲೇ ತೆರಳಲಿ ಎಂದಿದ್ದಾರೆ.