ರಾಜಕ್ಕೀಯಾಗಿ ಸುಳ್ಳು ಹೇಳೋದು ಸಿಎಂ ಜವಾಬ್ದಾರಿಗೆ ಶೋಭೆ ತರುವಂಥದ್ದಲ್ಲ: ಜಿ.ಟಿ. ದೇವೇಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಂಸದ ಪ್ರಜ್ವಲ್ ರೇವಣ್ಣರನ್ನು, ದೇವೇಗೌಡರೇ ವಿದೇಶಕ್ಕೆ ಕಳಿಸಿದ್ದು ಎಂದು ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಬಗ್ಗೆ ಜೆಡಿಎಸ್​ ಕೋರ್ ಕಮಿಟಿ ಅಧ್ಯಕ್ಷ  ಜಿ.ಟಿ. ದೇವೇಗೌಡ ಗರಂ ಆಗಿದ್ದಾರೆ.

ಈ ಸಮಯದಲ್ಲಿ ರಾಜಕೀಯಕ್ಕಾಗಿ ಸುಳ್ಳು ಹೇಳುವುದು ಶೋಭೆಯಲ್ಲ. ರಾಜ್ಯ ಸರ್ಕಾರ ಏಕೆ ತನಿಖೆ ಮಾಡುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಕೇಳಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಹೀಗೆ ಮಾತಾಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿ ಮಾಡಿಕೊಂಡಿದ್ದಕ್ಕೆ ಈ ರೀತಿ ಆರೋಪಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಂಸದರಾಗಿ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ ಅವರಿಗೆ ರೆಡ್ ಪಾಸ್‌ಪೋರ್ಟ್‌‌‌‌ ಕೊಡುತ್ತಾರೆ. ರೆಡ್ ಪಾಸ್‌ಪೋರ್ಟ್‌‌‌‌ ಇದ್ದವರು ವಿದೇಶಗಳಿಗೆ ಹೋಗಬಹುದು. ಪ್ರಜ್ವಲ್​​​​​ ತಪ್ಪಿತಸ್ಥ ಎಂದು ಸಾಬೀತಾದರೆ ಪಕ್ಷದಿಂದ ಉಚ್ಚಾಟಿಸುತ್ತೇವೆ. ತಪ್ಪು ಸಾಭೀತಾದರೆ ಶಿಕ್ಷೆ ಅನುಭವಿಸಲೇಬೇಕಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!