ಮೈಸೂರಿನಲ್ಲಿ ಅತಿಯಾಯ್ತು ಬಿಸಿಲು, ಮನೆಯಿಂದ ಹೊರಬರಬೇಡಿ ಎಂದ ಹವಾಮಾನ ಇಲಾಖೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ದಿನೇ ದಿನೇ ಹೆಚ್ಚುತ್ತಿರುವ ಬಿಸಿಲ ಬೇಗೆಗೆ ರಾಜ್ಯದ ಜನರು ಕಂಗಾಲಾಗಿದ್ದಾರೆ.ಯಾವಾಗ ಮಳೆ ಬರುತ್ತದೋ ಎಂದು ಕಾದು ಕುಳಿತಿದ್ದಾರೆ. ಆದರೆ ಮಳೆಯ ಛಾಯೆ ಕೂಡ ಕಾಣಿಸುತ್ತಿಲ್ಲ. ಮೈಸೂರಿನಲ್ಲಿ ಅತಿಯಾದ ಬಿಸಿಲಿನಿಂದ ಜನ ಹೈರಾಣಾಗಿದ್ದು, ಮನೆಯಿಂದ ಹೊರಬರಬೇಡಿ ಎಂದು ಹವಾಮಾನ ಇಲಾಖೆ ಹೇಳಿದೆ.

ಇಂದಿನಿಂದ ಮೇ. 5 ರವರೆಗೆ ಮೈಸೂರಿನಲ್ಲಿ ಅರೇಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಶಾಖದ ಅಲೆ ಎಚ್ಚರಿಕೆಯಿಂದ ಈ ಘೋಷಣೆ ಮಾಡಲಾಗಿದೆ.

ಭಾರತದ ಹವಾಮಾನ ಇಲಾಖೆಯು ವಯಸ್ಸಾದವರು, ಮಕ್ಕಳನ್ನು ಬಿಸಿಲಿಗೆ ಕರೆ ತರಬೇಡಿ. 12 ಗಂಟೆಯಿಂದ 3 ಗಂಟೆಯ ವರೆಗೆ ಬಿಸಿಲಲ್ಲಿ ಕೆಲಸ ಮಾಡಬೇಡಿ. ಬಿಸಿಲಿಗೆ ಹೋಗುವ ಮುನ್ನ ಟೋಪಿ, ಕನ್ನಡಕ ಹಾಕಿಕೊಳ್ಳುವಂತೆ ಸೂಚನೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!