Tuesday, August 16, 2022

Latest Posts

ತೆಲುಗು ಧಾರಾವಾಹಿಗಳಲ್ಲಿ ಕನ್ನಡ ನಟ/ನಟಿಯರ ಬ್ಯಾನ್?‌ ಇಂದು ಸಂಜೆ ಸಭೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎರಡು ದಿನಗಳ ಹಿಂದೆ ಕಿರುತೆರೆ ನಟ ಚಂದನ್ ಕುಮಾರ್ ಹಾಗೂ ತೆಲುಗು ಧಾರಾವಾಹಿ ತಂಡದ ನಡುವೆ ನಡೆದ ಗಲಾಟೆ ಮತ್ತಷ್ಟು ಜೋರಾಗಿದೆ. ಶೂಟಿಂಗ್ ವೇಳೆ ಧಾರಾವಾಹಿಗೆ ಕೆಲಸ ಮಾಡುತ್ತಿದ್ದ ಸಹಾಯಕ ನಿರ್ದೇಶಕನನ್ನು ಅವಾಷ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ನೆಡೆಸಿದ್ದಾರೆಂದು ಚಂದನ್‌ ಮೇಲೆ ಹಲ್ಲೆ ಮಾಡಿದ್ದರು. ಘಟನೆ ಬಳಿಕ ಹೈದರಾಬಾದ್‌ನಿಂದ ಚಂದನ್‌ ಬೆಂಗಳೂರಿಗೆ ವಾಪಸಾಗಿದ್ದಾರೆ.

ಆದರೆ, ಈ ಗಲಾಟೆ ಇದೀಗ ತೆಲುಗು ತೆರೆ ಮೇಲೆ ಅಭಿನಯಿಸುತ್ತಿರುವ ಇತರೆ ನಟ/ನಟಿಯರ ಮೇಲೆ ಪರಿಣಾಮ ಬೀರಿದೆ. ಈ ಬಗ್ಗೆ ಅಲ್ಲಿನ ಟಿವಿ ಫೆಡರೇಷನ್‌ ಗಂಭೀರವಾಗಿದ್ದು, ನಾವು ಗಲಾಟೆಯನ್ನು ಕೊನೆಗೊಳಿಸಿದ್ದೆವು. ಆದರೆ ಚಂದನ್‌ ಕರ್ನಾಟಕದಲ್ಲಿ  ಪ್ರೆಸ್‌ಮೀಟ್‌ ನಡೆಸಿ ನನಗೆ ಅವಮಾನವಾಗಿದೆ. ಯಾವುದೇ ತಪ್ಪು ಮಾಡದಿದ್ದರೂ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ, ಕನ್ನಡಿಗರಿಗೆ ತೆಲುಗಿನಲ್ಲಿ ಬೆಲೆ ಇಲ್ಲ ಎಂದು ತೆಲುಗು ಸಿನಿ ಪರಿಶ್ರಮದ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಅವರನ್ನು ತೆಲುಗು ಸಿನಿ ಇಂಡಸ್ಟ್ರಿಯಿಂದ ಬ್ಯಾನ್‌ ಮಾಡಲಾಗಿದೆ ಎಂದು ಕಿಡಿಕಾರಿದರು. ಅಷ್ಟೇ ಅಲ್ಲದೆ ತೆಲುಗಿನಲ್ಲಿ ಕನ್ನಡ ನಟ/ನಟಿಯರ ಡಾಮಿನೇಟ್‌ ಹೆಚ್ಚಾಗಿದ್ದು, ಅವರನ್ನು ತೆಲುಗು ಸೀರಿಯಲ್‌ಗಳಿಂದ ಬ್ಯಾನ್‌ ಮಾಡಬೇಕೆಂಬ ಮಾತುಗಳು ಕೇಳಿ ಬರುತ್ತಿವೆ.

ಈ ಕುರಿತು ಇಂದು ಸಂಜೆ ಫಿಲಂ ಚೇಂಬರ್‌ನಲ್ಲಿ ಟಿವಿ ಫೆಡರೇಶನ್ ಸಭೆ ನಡೆಯಲಿದ್ದು, ಪತ್ರಿಕಾಗೋಷ್ಠಿಯನ್ನೂ ಆಯೋಜಿಸಲಾಗುವುದು ಎಂದು ಟಿವಿ ಫೆಡರೇಷನ್‌ ಸದಸ್ಯರು ತಿಳಿಸಿದ್ದಾರೆ. ಜೊತೆಗೆ ಕನ್ನಡ ಕಲಾವಿದರನ್ನು ಬ್ಯಾನ್‌ ಮಾಡುವ ಬಗ್ಗೆಯೂ ಚಿಂತನೆ ನಡೆಸುವುದಾಗಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss