ಭಾರತ-ವಿಂಡೀಸ್‌ 3ನೇ ಟಿ20 ಪಂದ್ಯಕ್ಕೂ ಲಾಜಿಸ್ಟಿಕ್​ ಸಮಸ್ಯೆ: ಒಂದೂವರೆ ಗಂಟೆ ವಿಳಂಬ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವೆಸ್ಟ್​ ಇಂಡೀಸ್-ಭಾರತದ ನಡುವೆ ಮೂರನೇ ಟಿ20 ಪಂದ್ಯ ನಡೆಯಲಿದ್ದು, ಇಂದು ಕೂಡ ಒಂದೂವರೆ ಗಂಟೆ ತಡವಾಗಿ ಆರಂಭಗೊಳ್ಳಲಿದೆ. ಎ
ರಡನೇ ಟಿ20 ಪಂದ್ಯದ ರೀತಿಯಲ್ಲಿ ಈ ಪಂದ್ಯಕ್ಕೂ ಲಾಜಿಸ್ಟಿಕ್​ ಸಮಸ್ಯೆ ಎದುರಾಗಿದೆ. ರಾತ್ರಿ 8 ಗಂಟೆಯ ಬದಲಿಗೆ 9:30ಕ್ಕೆ ಪಂದ್ಯ ನಿಗದಿಯಾಗಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮಾಹಿತಿ ಹಂಚಿಕೊಂಡಿದೆ.
ಉಭಯ ತಂಡಗಳ ನಡುವಿನ ನಿನ್ನೆಯ ಪಂದ್ಯವೂ ಸಹ ಮೂರು ಗಂಟೆಗಳಷ್ಟು ತಡವಾಗಿ ಶುರುವಾಗಿತ್ತು. ಇಂದಿನ ಪಂದ್ಯ ಸೇಂಟ್​ ಕಿಟ್ಸ್​​ನ ವಾರ್ನರ್​ ಪಾರ್ಕ್​​ನಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಪಡೆದಿದ್ದು, 2ನೇ ಪಂದ್ಯದಲ್ಲಿ ವಿಂಡೀಸ್​ ಗೆಲುವು ಸಾಧಿಸಿತು. ಹೀಗಾಗಿ, ಸರಣಿ 1-1 ರಲ್ಲಿ ಸಮಬಲಗೊಂಡಿದೆ. ಇಂದಿನ ಪಂದ್ಯದಲ್ಲಿ ಗೆಲುವು ದಾಖಲಿಸುವ ತಂಡ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!