ಟೆಂಪೊ ಪಲ್ಟಿ: ವಿದ್ಯಾರ್ಥಿನಿ ಸಾವು, 7 ಮಂದಿಗೆ ಗಾಯ

ಹೊಸದಿಗಂತ ವರದಿ, ಹೊನ್ನಾವರ:

ಮದುವೆ ಮುಗಿಸಿ ಊರಿಗೆ ಮರಳುತ್ತಿದ್ದವರ ಟೆಂಪೊ ಪಲ್ಟಿಯಾಗಿ 7 ಜನರು ಗಾಯಗೊಂಡಿದ್ದು, ಕಾಲೇಜು ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಹೊನ್ನಾವರ ತಾಲೂಕಿನ ಮಾಗೋಡ ಗ್ರಾಮದಲ್ಲಿ ಸಂಭವಿಸಿದೆ.
ಸಂಶಿ ನಿವಾಸಿ ಪ್ರಿನ್ಸಿಟಾ ಫ್ರಾನ್ಸಿಸ್ ಮಿರಾಂಡಾ(18) ಮೃತ ಯುವತಿಯಾಗಿದ್ದು, ಸಹೋದರಿಯ ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡು ರವಿವಾರ ರಾತ್ರಿ ಊರಿಗೆ ಮರಳುತ್ತಿರುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.
ಇಡಗುಂಜಿಯ ನಗರಬಸ್ತಿಕೇರಿಯಿಂದ ಸಂಶಿ ಕಡೆಗೆ ವೇಗವಾಗಿ ಟೆಂಪೊ ಚಲಾಯಿಸಿಕೊಂಡು ಬಂದ ಕಾರಣ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಟೆಂಪೊ ಚಾಲಕನ ವಿರುದ್ಧ ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!