ಹೊಸದಿಗಂತ ವರದಿ,ಕುಮಟಾ:
ಮದುವೆ ಸಮಾರಂಭಕ್ಕೆ ಹೊರಟ ಪ್ರಯಾಣಿಕರ ಟೆಂಪೊ ಪಲ್ಟಿಯಾಗಿ 17 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕುಮಟಾ ಸಮೀಪದ ಮಾನೀರ್ ಬಳಿ ನಡೆದಿದೆ.
ದಿವಗಿ ಬಳಿ ಇರುವ ಗ್ರಾಮ ಒಕ್ಕಲಿಗರ ಸಭಾಭವನದಲ್ಲಿ ನಡೆಯಲಿರುವ ಮದುವೆ ಸಮಾರಂಭಕ್ಕೆ ಹೊರಟ ಸಂದರ್ಭದಲ್ಲಿ ಟೆಂಪೊ ಹಿಮ್ಮುಖವಾಗಿ ಚಲಿಸಿ ಪಲ್ಟಿಯಾಗಿದ್ದು ಮಹಿಳೆಯರು ಮಕ್ಕಳು ಸೇರಿದಂತೆ 17 ಜನರು ತೀವ್ರವಾಗಿ ಗಾಯಗೊಂಡಿದ್ದು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.