ಹೊಸದಿಗಂತ ಕಲಬುರಗಿ:
ಚಾಕುವಿನಿಂದ ಇರಿದು ವಿದ್ಯಾರ್ಥಿಯೋರ್ವನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ನಗರದ ನಾಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸುಮೀತ್ ಮಲ್ಲಾಬಾದ್ (18) ಕೊಲೆಯಾದ ಯುವ ವಿದ್ಯಾರ್ಥಿಯಾಗಿದ್ದು, ಮುಂಬೈನಲ್ಲಿ ಅಂತಿಮ ವರ್ಷದ ಪದವಿಯ ವಿದ್ಯಾಭ್ಯಾಸ ಮಾಡುತ್ತಿದ್ದನು.
ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ತನ್ನ ತಾಯಿಯೊಂದಿಗೆ ಕಲಬುರಗಿಗೆ ಆಗಮಿಸಿ ನಗರದ ನಾಗನಹಳ್ಳಿ ಗ್ರಾಮದಲ್ಲಿ ವಾಸಿಸುತ್ತಿದ್ದನು. ಸುಮೀತ ಸಹೋದರ ಸಚಿನ ನಾಗನಹಳ್ಳಿ ಗ್ರಾಮದ ಯುವತಿಯ ಜೊತೆ ಸ್ನೇಹ ಹೊಂದಿದ್ದು, ಸುಮೀತ್ ಸಹೋದರನ ಮೇಲಿನ ಕೋಪಕ್ಕೆ ಯುವತಿಯ ಕುಟುಂಬಸ್ಥರ ಹಾಗೂ ಸುಮೀತ್ ನಡುವೆ ಗಲಾಟೆಯಾಗಿದೆ.
ಇಬ್ಬರು ನಡುವಿನ ಗಲಾಟೆಯಲ್ಲಿ ಸುಮೀತ್ ತಾಯಿಯ ಮೇಲೆ ನಾಲ್ಕೈದು ಜನರ ಗುಂಪು ಹಲ್ಲೆ ಮಾಡಿದ್ದಾರೆ.ತಾಯಿಯನ್ನು ದೂರ ಇರುವಂತೆ ಹೇಳಿದ ತಕ್ಷಣ ಸುಮೀತ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಈ ಕುರಿತು ವಿಶ್ವವಿದ್ಯಾಲಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.