ಯುವತಿಯ ಭೀಕರ ಹತ್ಯೆ: ಸೂಟ್‌ಕೇಸ್‌ನಲ್ಲಿ ಡೆಡ್‌ ಬಾಡಿ ಸಾಗಿಸಲು ಪ್ಲ್ಯಾನ್‌ ಮಾಡಿದ್ದ ಹಂತಕ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ 29 ವರ್ಷದ ಯುವತಿ ಮಹಾಲಕ್ಷ್ಮೀಯನ್ನು ಕೊಲೆ ಪ್ರಕರಣದಲ್ಲಿ ಭಾನುವಾರ ಬೆಳಗ್ಗೆ ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಮರಣೋತ್ತರ ಪರೀಕ್ಷೆ ಬಳಿಕ ಪೋಷಕರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ.

ಪೀಸ್ ಪೀಸ್ ಆಗಿದ್ದ ಬಾಡಿಯನ್ಜು ಪೋಸ್ಟ್ ಮಾರ್ಟಂ ಮಾಡುವುದೇ ವೈದ್ಯರಿಗೆ ದೊಡ್ಡ ಸವಾಲಾಗಿದೆ ಮಹಾಲಕ್ಷ್ಮಿ ಪೋಸ್ಟ್ ಮಾರ್ಟಂ ಹೇಗೆ ನಡೆಯಿತು ಅನ್ನೋದನ್ನ ನೋಡೋದಾದರೆ, ಮೊದಲು ಪ್ರತಿ ಪೀಸ್‌ಗೂ ನಂಬರ್‌ ಹಾಕಲಾಗಿತ್ತು. ಆ ಬಳಿಕ ಪ್ರತಿ ಪೀಸ್ ನ ರೆಡಿಯಾಲಿಜಿಕಲ್ ಎಕ್ಸಾಮೀನೇಶನ್ ಹಾಗೂ ಸಿಟಿ ಸ್ಕ್ಯಾನ್ ಎಕ್ಸರೇ ಕೂಡ ಮಾಡಲಾಗಿದೆ. ಆ ಬಳಿಕ ಆಯ್ದ ತುಂಡುಗಳ ಟಾಕ್ಸಿಕಲ್ ಎಕ್ಸಾಮಿನೇಷನ್ ಮಾಡಲಾಗಿದೆ. ಆಯ್ದ ತುಂಡುಗಳ ಪ್ಯಾಥಾಲಿಜಿಕಲ್ ಎಕ್ಸಾಮಿನೇಷನ್ ಕೂಡ ನಡೆದಿದೆ. ಕೊನೆಯಲ್ಲಿ ಡಿಎನ್‌ಎ ಪರೀಕ್ಷೆ ನಡೆದಿದೆ.

ಪೋಸ್ಟ್‌ ಮಾರ್ಟಮ್‌ ವೇಳೆ ಮಹಾಲಕ್ಷ್ಮಿಯ ತಲೆಯನ್ನ ಮೂರು ಭಾಗವಾಗಿ ಹಂತಕ ಕಟ್‌ ಮಾಡಿದ್ದಾನೆ ಎನ್ನುವುದು ಗೊತ್ತಾಗಿದೆ. ತುಂಡರಿಸಿರುವ ದೇಹವನ್ನ ನೋಡಿ ಇಡೀ ಕುಟುಂಬ ಶಾಕ್‌ ಆಗಿದೆ. ಇನ್ನು ದೇಹವನ್ನು ಕತ್ತರಿಸಿರುವ ರೀತಿ ನೋಡಿ ವೈದ್ಯರೂ ಕೂಡ ಅಚ್ಚರಿ ಪಟ್ಟಿದ್ದಾರೆ. ತುಂಡರಿಸಿದ ದೇಹವನ್ನ ಜೋಡಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಹಂತ ಹಂತವಾಗಿ ಜೋಡಿಸಿ ಮರಣೋತ್ತರ ಪರೀಕ್ಷೆ ನಡೆದಿದೆ.

ಸೂಟ್‌ಕೇಸ್‌ ಪತ್ತೆ
ಇನ್ನು ಆರೋಪಿ ಮಹಾಲಕ್ಷ್ಮೀಯನ್ನು ಕೊಂದ ಬಳಿಕ ಆಕೆಯ ಮೃತದೇಹವನ್ನು ಹೊರಗೆ ಸಾಗಿಸುವ ಪ್ರಯತ್ನವನ್ನೂ ಮಾಡಿದ್ದ. ಆದರೆ, ಕೊನೆಯ ಕ್ಷಣದಲ್ಲಿ ತನ್ನ ಪ್ಲ್ಯಾನ್‌ ಬದಲಾಯಿಸಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಅದಕ್ಕೆ ಕಾರಣ, ಫ್ರಿಜ್‌ನ ಎದುರುಗಡೆ ಇರುವ ಸೂಟ್‌ಕೇಸ್‌. ಭಾನುವಾರ ಮಹಾಲಕ್ಮೀ ಕೊಲೆ ಕೇಸ್‌ನ ಪ್ರಮುಖ ವಿಡಿಯೋ ಮಾಧ್ಯಮಗಳಿಗೆ ಲಭಿಸಿದೆ. ಆಕೆಯ ತಾಯಿ ಮನೆಯ ಕೀ ತೆಗೆದು ಒಳಗೆ ಹೋಗುವ ವೇಳೆ ಅದನ್ನು ವಿಡಿಯೋ ಮಾಡಿದ್ದಾರೆ. ಈ ವೇಳೆ ಫ್ರಿಜ್‌ನ ಎದುರು ಖಾಲಿ ಸೂಟ್‌ಕೇಸ್‌ ಕಂಡಿದೆ.

ಮಹಾಲಕ್ಷ್ಮಿ ದೇಹವನ್ನ ತುಂಡಾಗಿಸಿ ಹೊರಗಡೆ ಸಾಗಿಸೋದು ಆರೋಪಿಯ ಪ್ಲಾನ್ ಆಗಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಮಹಾಲಕ್ಷ್ಮಿ ತಾಯಿ ಮನೆಗೆ ಬಂದಾಗ ಮಾಡಿದ್ದ ವಿಡಿಯೋ ನೋಡಿದ್ರೆ, ಇಂಥ ಹಲವು ಅನುಮಾನಗಳು ಮೂಡಿದೆ. ಫ್ರಿಡ್ಜ್ ಮುಂದೆಯೇ ಕೊಲೆಗಡುಕ ಸೂಟ್ ಕೇಸ್ ಇಟ್ಟಿದ್ದ ದೇಹ ತುಂಡಾಗಿಸಿ ಸೂಟ್ ಕೇಸ್ ನಲ್ಲಿ ಸಾಗಿಸೋದು ಆರೋಪಿಯ ಪ್ಲಾನ್ ಆಗಿದ್ದಿರಬಹುದು ಎಂದು ಪೊಲೀಸರೂ ಅಂದಾಜು ಮಾಡಿದ್ದಾರೆ.

ಕಪ್ಪು ಬಣ್ಣದ ಸೂಟ್ ಕೇಸ್ ನಲ್ಲಿ ಮೃತದೇಹ ಸಾಗಿಸೋ ಆರೋಪಿಯ ಪ್ಲಾನ್ ಆಗಿತ್ತು. ಅದಲ್ಲದೆ, ಕೊಲೆ ಮಾಡಿ ಮನೆ ಪೂರ್ತಿ ಕ್ಲೀನ್‌ ಮಾಡಿದ್ದ. ರಕ್ತವನ್ನು ಟಾಯ್ಲೆಟ್‌ನಲ್ಲಿ ಹಾಕಿದ್ದಿರಬಹುದು ಎನ್ನಲಾಗಿದೆ. ಮಹಾಲಕ್ಷ್ಮಿ ದೇಹವನ್ನ ತುಂಡು ತುಂಡಾಗಿ ಕಟ್ ಮಾಡಿದ್ದರೂ, ಮನೆಯಲ್ಲಿ ರಕ್ತ ಚೆಲ್ಲಿರಲಿಲ್ಲ. ಚೆಲ್ಲಿದ್ದ ರಕ್ತವನ್ನ ಆರೋಪಿ ಬಟ್ಟೆಯಿಂದ ಒರೆಸಿ ಹೋಗಿದ್ದಾರೆ. ಒರೆಸಿರುವ ಬಟ್ಟೆಯನ್ನೂ ಆರೋಪಿ ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಹಾಗಾದಲ್ಲಿ ಆರೋಪಿ ಪ್ಲಾನ್ ಏನಾಗಿತ್ತು ಅನ್ನೋದೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!