Friday, December 8, 2023

Latest Posts

ಬದಿಯಡ್ಕದಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರು ಮಹಿಳೆಯರ ಸಹಿತ ಐವರು ಸ್ಥಳದಲ್ಲೇ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅಟೋರಿಕ್ಷಾ ಹಾಗೂ ಶಾಲಾ ಬಸ್ ಪರಸ್ಪರ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಸಹಿತ ಐವರು ದಾರುಣವಾಗಿ ಮೃತಪಟ್ಟ ಘಟನೆ ಪಳ್ಳತ್ತಡ್ಕದಲ್ಲಿ ನಡೆದಿದೆ.

ಇಂದು ಸಂಜೆ ಕಾಸರಗೋಡು ಜಿಲ್ಲೆಯ ಬದಿಯಡ್ಕ ಪರಿಸರದ ಪಳ್ಳತ್ತಡ್ಕದಲ್ಲಿ ಘಟನೆ ನಡೆದಿದೆ.

ಮೂಲತಃ ತಾಯಲಂಗಾಡಿ ನಿವಾಸಿಗಳೂ, ಪ್ರಸ್ತುತ ಮೊಗ್ರಾಲ್ ಪುತ್ತೂರು ಮೊಗರು ಎಂಬಲ್ಲಿ ವಾಸಿಸುತ್ತಿರುವ ಎ.ಎಚ್.ಅಬ್ದುಲ್ ರೌಫ್(58), ಶೇಖ್ ಆಲಿ ಎಂಬವರ ಪತ್ನಿ ಬೀಪಾತಿಮ್ಮ (60), ಸಹೋದರಿಯರಾದ ಮೊಗರು ನಿವಾಸಿಗಳಾದ ಹುಸೈನ್ ಎಂಬವರ ಪತ್ನಿ ಬೀಪಾತಿಮ್ಮ(50), ಇಸ್ಮಾಯಿಲ್ ಎಂಬವರ ಪತ್ನಿ ಉಮ್ಮು ಹಲೀಮ, ಬೆಳ್ಳೂರಿನ ಅಬ್ಜಾಸ್ ಎಂಬವರ ಪತ್ನಿ ನಫೀಸ ಮೃತಪಟ್ಟವರು.

ಮಾನ್ಯ ಖಾಸಗಿ ಶಾಲೆಯ ಬಸ್ ಮಕ್ಕಳನ್ನು ಪೆರ್ಲಕ್ಕೆ ತಲಪಿಸಿ ಮರಳುತ್ತಿದ್ದಾಗ ಮೊಗ್ರಾಲ್ ಪುತ್ತೂರಿನಿಂದ ಪೆರ್ಲಕ್ಕೆ ತೆರಳುತ್ತಿದ್ದ ಆಟೋ ನಡುವೆ ಭೀಕರ ಅಪಘಾತ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!