ವಿಶ್ವಕ್ಕೆ ಮತ್ತೊಂದು ಕೊರೋನಾ ವೈರಸ್?: ಚೀನಾ ವೈರಾಲಜಿಸ್ಟ್ ಕೊಟ್ಟ ಎಚ್ಚರಿಕೆ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೋವಿಡ್ ವೈರಸ್‌ ಬಳಿಕ ಮತ್ತೆ ಚೇತರಿಕೆ ಕಾಣುತ್ತಿರುವ ವಿಶ್ವಕ್ಕೆ ಚೀನಾ ಮತ್ತೊಂದು ಶಾಕ್ ನೀಡಿದೆ.

ಕೊರೋನಾದಿಂದ ಭಾರತ ಸೇರಿದಂತೆ ಇಡೀ ವಿಶ್ವವೇ ನರಳಾಡಿತ್ತು.ಆರೋಗ್ಯ ಕ್ಷೇತ್ರಕ್ಕೆ ಸವಾಲಾದ ಕೋವಿಡ್ ವೈರಸ್ ಎದುರಿಸಿ ನಿಯಂತ್ರಿಸಲು ಸರಿಸುಮಾರು ಎರಡೂವರೇ ವರ್ಷಗಳೇ ತೆಗೆದುಕೊಳ್ಳಬೇಕಾಯಿತು.

ಇದೀಗ ಚೀನಾದ ಪ್ರಖ್ಯಾತ ವಿರಾಲಜಿಸ್ಟ್, ಬ್ಯಾಟ್‌ಮಾನ್ ಎಂದೇ ಹೆಸರುವಾಸಿಯಾಗಿರುವ ಶಿ ಝೆಂಗ್ಲಿ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ವಿಶ್ವ ಮತ್ತೊಂದು ಕೊರೋನಾ ರೀತಿಯ ವೈರಸ್ ಎದುರಿಸಲು ಸಜ್ಜಾಗಿ ಎಂದಿದ್ದಾರೆ.

ಪ್ರಾಣಿಗಳು, ಪಕ್ಷಿಗಳು ಪ್ರಮುಖವಾಗಿ ಬಾವಲಿಗಳಿಂದ ಹರಡುವ ವೈರಸ್ ಕುರಿತು ಸಂಶೋಧನೆ ನಡೆಸುತ್ತಿರುವ ಶಿ ಝೆಂಗ್ಲಿ ಸ್ಫೋಟಕ ಹೇಳಿಕೆ ನೀಡಿದ್ದು, ಭವಿಷ್ಯದಲ್ಲಿ ಕೊರೋನಾ ರೀತಿಯ ವೈರಸ್ ಅಪ್ಪಳಿಸಲಿದೆ. ಇದಕ್ಕಾಗಿ ವಿಶ್ವ ಈಗಲೇ ಸಿದ್ಧತೆ ನಡೆಸಿಕೊಳ್ಳಬೇಕು ಎಂದಿದ್ದಾರೆ.

ವುಹಾನ್ ವೈರಾಲಜಿ ಲ್ಯಾಬ್‌ನ ಪ್ರಮುಖ ಸಂಶೋಧಕಿಯಾಗಿರುವ ಝೆಂಗ್ಲಿ ನೀಡಿದ ಈ ಎಚ್ಚರಿಕೆ ವಿಶ್ವವನ್ನೇ ತಲ್ಲಣ ಗೊಳಿಸಿದೆ.

ಈ ಕುರಿತು ಬೃಹತ್ ವರದಿ ತಯಾರಿಸಿರುವ ಝೆಂಗ್ಲಿ, ಮಾನವನ ಆರೋಗ್ಯಕ್ಕೆ ಮಾರಕವಾಗಬಲ್ಲ 40 ಕೊರೋನಾ ರೀತಿಯ ವೈರಸ್ ಪತ್ತೆ ಹಚ್ಚಿದ್ದಾರೆ. ಈ 40 ವೈರಸ್ ಪೈಕಿ ಕೋವಿಡ್ ಸೇರಿದಂತೆ ಕೇವಲ 6 ವೈರಸ್ ಈಗಾಗಲೇ ಮಾನವನಿಗೆ ತೀವ್ರ ಸಂಕಷ್ಟ ತಂದಿದೆ. ಇನ್ನುಳಿದ ವೇರಿಯೆಂಟ್ ವೈರಸ್ ಭವಿಷ್ಯದಲ್ಲಿ ಅಪ್ಪಳಿಸಲಿದೆ ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!