ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತ: ಸಿಸಿಟಿವಿಯಲ್ಲಿ ದೃಶ್ಯ ಸೆರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ತಿರುಮಂಗಲಂ ಬಳಿಯ ಶಿವರಕೊಟ್ಟೈನ ವಿರುಧುನಗರ-ಮಧುರೈ ಹೆದ್ದಾರಿಯಲ್ಲಿ ಬುಧವಾರ ವೇಗವಾಗಿ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕುಟುಂಬದ ನಾಲ್ವರು ಸದಸ್ಯರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ.

ರಸ್ತೆ ಅಪಘಾತದ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ವಿಲ್ಲಪುರಂನ ಮಣಿ ಎಂದು ಗುರುತಿಸಲ್ಪಟ್ಟ ವ್ಯಕ್ತಿ ತನ್ನ ಪತ್ನಿ ನಾಗಜ್ಯೋತಿ, ಅವರ 8 ವರ್ಷದ ಮಗಳು ಮತ್ತು ಅವರ ಪೋಷಕರಾದ ಕನಕವೇಲ್ ಮತ್ತು ಕೃಷ್ಣವೇಣಿ ಅವರೊಂದಿಗೆ ಮಧುರೈಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ವೀಡಿಯೊದಲ್ಲಿ ಬಿಳಿ ಬಣ್ಣದ ಕಾರು ಮೊದಲು ಡಿವೈಡರ್ ಗೆ ಡಿಕ್ಕಿ ಹೊಡೆದು ನಂತರ ಕರುವೆಲಂಪಟ್ಟಿಯ 53 ವರ್ಷದ ಜಿ ಪಾಂಡಿ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ನಂತರ ಅದು ಹೆದ್ದಾರಿಯ ಇನ್ನೊಂದು ಬದಿಯ ಸರ್ವಿಸ್ ರಸ್ತೆಗೆ ಪಲ್ಟಿಯಾಗಿದೆ.ಕುಟುಂಬದ ಮುಖ್ಯಸ್ಥರು ದೇವಾಲಯದ ಉತ್ಸವದಲ್ಲಿ ಭಾಗವಹಿಸಿದ ನಂತರ ತಲ್ವಾಯಿಪುರಂನಿಂದ ಹಿಂದಿರುಗುತ್ತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!