August 14, 2026
Friday, August 14, 2026
spot_img

ಬೆಂಗಳೂರಿನ ಹೊಟೇಲ್‌ವೊಂದರಲ್ಲಿ ಭೀಕರ ದುರಂತ: ಲಿಫ್ಟ್‌ನಲ್ಲಿ ಸಿಲುಕಿ ಯುವಕ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಜಯನಗರದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ವಾಣಿಜ್ಯ ಸಂಸ್ಥೆಯ ಹಳೆಯ ಮಾದರಿಯ ಸರ್ವಿಸ್‌ ಲಿಫ್ಟ್‌ನಲ್ಲಿ ತಲೆ ಸಿಲುಕಿ ಯುವಕನೊಬ್ಬ ಮೃತಪಟ್ಟಿದ್ದಾನೆ.

ಧಾರವಾಡ ಮೂಲದ ರಾಜೇಶ್‌ ಮೃತರು. ತನ್ನ ಸ್ವಂತ ಹೊಟೇಲ್‌ ಆರಂಭಿಸುವ ಉದ್ದೇಶ ಹೊಂದಿದ್ದ ರಾಜೇಶ್‌, ಹೊಟೇಲ್‌ಗಳಿಗೆ ಭೇಟಿ ನೀಡಿ ಅದರ ನಿರ್ವಹಣೆ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ತನ್ನ ಸ್ನೇಹಿತನ ಹೊಟೇಲ್‌ವೊಂದಕ್ಕೆ ತೆರಳಿ ಪರಿಶೀಲನೆ ಮಾಡುವ ವೇಳೆ ಅವಘಡ ಸಂಭವಿಸಿದೆ.

ಬೆಳಗ್ಗೆ ಸುಮಾರು 8.30ರ ವೇಳೆಗೆ, ನೆಲ ಮಹಡಿಯಿಂದ ಮೊದಲ ಮಹಡಿಗೆ ಆಹಾರ ಪದಾರ್ಥಗಳನ್ನು ಹೋಟೆಲ್‌ನ ಸರಕು ಸಾಗಣೆ (ಸರ್ವಿಸ್) ಲಿಫ್ಟ್ ಮೂಲಕ ಕಳುಹಿಸಲಾಗುತ್ತಿತ್ತು. ಇದೇ ವೇಳೆ ಲಿಫ್ಟ್‌ನ ಬಾಗಿಲು ಏಕಾಏಕಿ ತೆರೆದಿದೆ.

ರಾಜೇಶ್ ಲಿಫ್ಟ್‌ನಿಂದ ಹೊರಬರಲು ಮುಂದಾದಾಗ, ಲಿಫ್ಟ್ ಏಕಾಏಕಿ ಚಲಿಸಲು ಆರಂಭಿಸಿದೆ. ಇದರಿಂದ ಅವರ ತಲೆ ಲಿಫ್ಟ್‌ನ ಮೇಲ್ಭಾಗದ ಅಂಚಿಗೆ (ಲಿಂಟೆಲ್) ಸಿಲುಕಿ ತೀವ್ರವಾಗಿ ಪೆಟ್ಟಾಗಿದೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಸಂಬಂಧ ಹೋಟೆಲ್ ಹಾಗೂ ಕಟ್ಟಡ ಮಾಲೀಕರ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು ಜಯನಗರ ಪೊಲೀಸರು ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !