ರಷ್ಯಾ ಮೇಲೆ ಟೆರರ್ ಅಟ್ಯಾಕ್: ಗುಂಡಿನ ಮಳೆಗೆ ಕನಿಷ್ಟ 70 ಮಂದಿ ಸಾವು, ಹೊಣೆ ಹೊತ್ತ ಐಸಿಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ ಮಾಸ್ಕೋದಲ್ಲಿ ಭೀಕರ ನರಮೇಧ ನಡೆದಿದೆ.

ISIS claims responsibility in deadly attack on Russia's Crocus City Hall -  ABC Newsಇಲ್ಲಿನ ಕ್ರೋಕಸ್ ಸಿಟಿ ಹಾಲ್‌ನಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮವೊಂದಕ್ಕೆ ನುಗ್ಗಿದ ಅಪರಿಚಿತ ಶಸ್ತ್ರಧಾರಿಗಳ ಗುಂಪೊಂದು ಏಕಾಏಕಿ ಗುಂಡಿನ ಮಳೆಗರೆದಿದ್ದು, ಈ ಘಟನೆಯಲ್ಲಿ ಕನಿಷ್ಟ 70 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, 200 ಕ್ಕೂ ಅಧಿಕ ಮಂದಿ ತೀವ್ರ ಗಾಯಗೊಂಡಿದ್ದಾರೆ.

ಈ ಘಟನೆಯ ಬಗ್ಗೆ ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್‌ನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಸಾವಿರಕ್ಕೂ ಅಧಿಕ ಮಂದಿ ನೆರೆದಿದ್ದ ಈ ಸಮಾರಂಭವನ್ನು ಗುರಿಯಾಗಿಟ್ಟು ಕಳೆದ ರಾತ್ರಿ ಈ ಭೀಭತ್ಸ್ಯ ಘಟನೆ ನಡೆದಿದೆ. ಮೇಲ್ನೋಟಕ್ಕೆ ಇದೊಂದು ಉಗ್ರರ ಕೃತ್ಯ ಎಂದು ಶಂಕಿಸಲಾಗಿದೆ.

India stands in solidarity with Russia in this hour of grief, says PM Modi  on Moscow terror attack - The Hinduಗುಂಡಿನ ದಾಳಿ ಆರಂಭವಾಗುತ್ತಲೇ ಏನಾಗುತ್ತಿದೆ ಎಂದು ಅರಿಯದೆ ಜನ ದಿಕ್ಕಾಪಾಲಾಗಿ ಓಡಿದ್ದು, ಈ ವೇಳೆ ಕೆಲವರು ಕಾಲ್ತುಳಿತಕ್ಕೆ ಸಿಲುಕಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಸಾವು ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಈ ನರಮೇಧದ ಹೊಣೆಯನ್ನು ಐಸಿಎಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ ಎಂದೂ ಅದು ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!