ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಲ್ವಾಮಾದಲ್ಲಿ ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಉಗ್ರರ ಸಹಚರನೊಬ್ಬನನ್ನು ಭದ್ರತಾ ಪಡೆಗಳು ಭಾನುವಾರ ಬಂಧಿಸಿದ್ದು, ಆತನಿಂದ ಶಸಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಪುಲ್ವಾಮಾದ ತಹಾಬ್ ಪ್ರದೇಶದ ಸಜಾದ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ. ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಮತ್ತು ಸ್ಫೋಟ ಕಾಯ್ದೆಯಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾರ್ ನನ್ನು ಸಿಆರ್ ಪಿಎಫ್ ಮತ್ತು ಪೊಲೀಸರನ್ನೊಳಗೊಂಡ ಜಂಟಿ ತಂಡ ಬಂಧಿಸಿದೆ ಎಂದು ವಕ್ತಾರರೊಬ್ಬರು ಹೇಳಿದ್ದಾರೆ.
ಬಂಧಿತ ಸಜಾದ್ ಅಹ್ಮದ್ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಇಟ್ಟುಕೊಂಡಿದ್ದ ತನ್ನ ಅಂಗಡಿಯ ಸ್ಥಳವನ್ನು ತಿಳಿಸಿದ ನಂತರ ಜಂಟಿ ತಂಡ ಅಲ್ಲಿ ದಾಳಿ ನಡೆಸಿದ್ದು, ಒಂದು ಪಿಸ್ತೂಲ್, ಮ್ಯಾಗಜೇನ್ ಹಗೂ 12 ಸುತ್ತು ಮದ್ದುಗುಂಡು ಮತ್ತು ಎರಡು ಜೀವಂತ ಗ್ರೆನೇಡ್ ವಶಕ್ಕೆ ಪಡೆದಿರುವುದಾಗಿ ಅವರು ಮಾಹಿತಿ ನೀಡಿದರು.