ಕಾಶ್ಮೀರದಲ್ಲಿ ಪೋಲೀಸ್‌ ಮನೆಯೊಳಗೇ ನುಗ್ಗಿ ಅಧಿಕಾರಿಯ ಹತ್ಯೆ ಮಾಡಿದ ಉಗ್ರರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪೋಲೀಸ್‌ ಅಧಿಕಾರಿಯ ಮನೆಗೆ ನುಗ್ಗಿದ ಭಯೋತ್ಪಾದಕರು ಅಧಿಕಾರಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಘಟನೆ ನಡೆದಿರುವುದು ವರದಿಯಾಗಿದೆ.

ಮೂಲಗಳ ಪ್ರಕಾರ ಶನಿವಾರದ ಮಧ್ಯರಾತ್ರಿ ಪಂಪೋರ್ ಪ್ರದೇಶದ ಸಂಬೂರಾದಲ್ಲಿ ಸಬ್ ಇನ್ಸ್‌ಪೆಕ್ಟರ್ ಫಾರೂಕ್ ಅಹ್ಮದ್ ಮಿರ್ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ. ಹತ್ಯೆಗೀಡಾದ ಅಧಿಕಾರಿಯು ಸಿಟಿಸಿ ಲೆತ್‌ಪೋರಾದ ಐಆರ್‌ಪಿ 23ನೇ ಬೆಟಾಲಿಯನ್‌ನಲ್ಲಿ ನಿಯೋಜನೆಯಾಗಿದ್ದರು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!