ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೇನಾ ನೆಲೆ ಮತ್ತು ಪ್ರಯಾಣಿಕರ ಬೋಟ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಘಟನೆಯಲ್ಲಿ 49 ನಾಗರಿಕರು, 15 ಸೈನಿಕರು ಸೇರಿದಂತೆ ಒಟ್ಟು 64 ಮಂದಿ ಮೃತಪಟ್ಟಿರುವ ಘಟನೆ ಆಫ್ರಿಕಾ ದೇಶದ ಮಾಲಿಯ ನೈಜರ್ ನದಿಯ ತೀರದಲ್ಲಿ ಗುರುವಾರ ನಡೆದಿದೆ ಎಂದು ಮಾಲಿಯನ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೈಜರ್ ನದಿಯ ಟಿಂಬಕ್ಟು ನಗರದ ಸಮೀಪದಲ್ಲಿರುವ ಪ್ರಯಾಣಿಕರ ಬೋಟ್ ಮತ್ತು ಉತ್ತರ ಗಾವೊ ಪ್ರದೇಶದ ಮಾಲಿಯನ್ ಮಿಲಿಟರಿಯನ್ನು ಗುರಿಯಾಗಿರಿಸಿಕೊಂಡು ಎರಡು ಪ್ರತ್ಯೇಕ ದಾಳಿಗಳನ್ನು ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಇಸ್ಲಾಮಿಸ್ಟ್ ಉಗ್ರಗಾಮಿ ದಂಗೆಕೋರ ಗುಂಪು ಜೆಎನ್‌ಐಎಂ ಮತ್ತು ಅಲ್ ಖೈದಾದೊಂದಿಗೆ ಮೈತ್ರಿ ಮಾಡಿಕೊಂಡಿರುವ ಕೆಲವು ಸಶಸ್ತ್ರ ಸಜ್ಜಿತ ಗುಂಪುಗಳು ದಾಳಿಯ ಕುರಿತು ಹೇಳಿಕೊಂಡಿವೆ. ಅದಾಗ್ಯೂ ಮಿಲಿಟರಿ ಪಡೆಗಳು ಕೂಡ ಸುಮಾರು 50 ದಾಳಿಕೋರರನ್ನು ಹತ್ಯೆ ಮಾಡಿರುವುದಾಗಿ ಮಾಲಿಯನ್ ಸರ್ಕಾರ ಹೊರಡಿಸಿದ ಪ್ರಕಟಣೆಯಲ್ಲಿ ಹೇಳಿದೆ. ಹುತಾತ್ಮರಾದ ನಾಗರಿಕರು ಮತ್ತು ಸೈನಿಕರ ಗೌರವಾರ್ಥ ಶುಕ್ರವಾರದಿಂದ ಮೂರು ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ.