300 ಅಡಿ ಪ್ರಪಾತಕ್ಕೆ ಬಿದ್ದ ಟೆಸ್ಲಾ ಕಾರ್: ನಾಲ್ವರು ಬದುಕುಳಿದಿದ್ದಾರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ಯಾಲಿಫೋರ್ನಿಯಾದಲ್ಲಿ ಕುಟುಂಬದ ನಾಲ್ವರು ಪ್ರಯಾಣಿಸುತ್ತಿದ್ದ ಟೆಸ್ಲಾ ಕಾರು ಬಂಡೆಗಳಿರುವ 300 ಅಡಿ ಪ್ರಪಾತಕ್ಕೆ ಬಿದ್ದಿದೆ.

ಅದೃಷ್ಟವಶಾತ್ ನಾಲ್ವರೂ ಬದುಕುಳಿದಿದ್ದಾರೆ. ಆದರೆ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸಮುದ್ರ ತೀರದ ಡೆವಿಲ್ ಸ್ಲೈಡ್ ಕಡಿದಾದ ಬೆಟ್ಟಗುಡ್ಡದಲ್ಲಿ ಕಾರು ಚಲಿಸುತ್ತಿತ್ತು, ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ಕಾರು ಪ್ರಪಾತದಲ್ಲಿ ಬಿದ್ದಿದೆ.

ಇಬ್ಬರು ಮಕ್ಕಳು ಹಾಗೂ ತಂದೆ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಪರಿಹಾರ ತಂಡ ಕುಟುಂಬವನ್ನು ಏರ್‌ಲಿಫ್ಟ್ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Rescue teams at the Pacific Coast Highway location where a Tesla plunged over a cliff Monday. ಕಾರ್‌ನ್ನು ನೋಡಿದವರಿಗೆ ಕಾರಿನಲ್ಲಿ ಇದ್ದವರು ಜೀವಂತವಾಗಿದ್ದಾರೆ ಎನ್ನುವುದು ಸಮಾಧಾನಕರವಾಗಿದೆ. ಪವಾಡಸದೃಶ್ಯವಾಗಿ ಎಲ್ಲರೂ ಬದುಕುಳಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!