ಟೆಸ್ಲಾ ಷೇರುಗಳಲ್ಲಿ ಏರಿಕೆ: ಮತ್ತೆ ವಿಶ್ವದ ಅತಿ ಶ್ರೀಮಂತ ಸ್ಥಾನಕ್ಕೇರಿದ ಮಸ್ಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2022ರಲ್ಲಿ ವಿಶ್ವದ ಅತಿ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದ ಬಿಲಿಯನೇರ್‌ ಎಲಾನ್‌ ಮಸ್ಕ್‌ ಸಾಮಾಜಿಕ ಜಾಲತಾಣ ಟ್ವೀಟರ್‌ ಖರೀದಿಯ ನಂತರ ಆ ಸ್ಥಾನದಿಂದ ಕೆಳಗಿಳಿದಿದ್ದರು. ಅವರ ಟೆಸ್ಲಾ ಕಂಪನಿಯ ಷೇರುಗಳು ಮಾರುಕಟ್ಟೆಯಲ್ಲಿ ಕುಸಿತ ಕಂಡ ಹಿನ್ನೆಲೆಯಲ್ಲಿ ಮಸ್ಕ್‌ ಅವರು ನಷ್ಟ ಅನುಭವಿಸುವಂತಾಗಿತ್ತು. ಈ ವೇಳೆ ಪ್ರಸಿದ್ಧ ಬ್ರ್ಯಾಂಡ್‌ ಲೂಯಿ ವೆಟಾನ್‌ ಮುಖ್ಯಸ್ಥ ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಟ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ್ದರು. 2023ರ ಆರಂಭದಲ್ಲಿ ಎಲಾನ್‌ ಮಸ್ಕ್‌ ಒಟ್ಟೂ ಸಂಪತ್ತು 137 ಬಿಲಿಯನ್ ಡಾಲರ್‌ ಗಳಷ್ಟಿತ್ತು. ಆದರೀಗ ಟೆಸ್ಲಾ ಷೇರುಗಳು ಏರಿಕೆ ಕಂಡ ಹಿನ್ನೆಲೆಯಲ್ಲಿಎಲಾನ್‌ ಮಸ್ಕ್‌ ಸಂಪತ್ತಿನಲ್ಲಿಯೂ ಏರಿಕೆಯಾಗಿದ್ದು ಮತ್ತೊಮ್ಮೆ ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಸ್ಥಾನಕ್ಕೇರಿದ್ದಾರೆ.

ಬ್ಲೂಮ್‌ಬರ್ಗ್‌ ವರದಿಯ ಪ್ರಕಾರ 28 ಫೆಬ್ರವರಿ 2023 ರ ಹೊತ್ತಿಗೆ ಟೆಸ್ಲಾ ಮುಖ್ಯ ಕಾರ್ಯನಿರ್ವಾಹಕ ಎಲೋನ್ ಮಸ್ಕ್ ಅವರ ನಿವ್ವಳ ಮೌಲ್ಯವು 187 ಬಿಲಿಯನ್‌ ಡಾಲರುಗಳಷ್ಟಿದೆ. 2023ರಲ್ಲಿ ಮಸ್ಕ್‌ ಅವರ ಆಸ್ತಿಯು 50 ಬಿಲಿಯನ್‌ ಡಾಲರ್‌ ಅಥವಾ 36 ಶೇಕಡಾದಷ್ಟು ಏರಿಕೆಯಾಗಿದೆ. ಬರ್ನಾರ್ಡ್ ಅರ್ನಾಲ್ಟ್ ಅವರ ಆಸ್ತಿ ಮೌಲ್ಯವು 185 ಬಿಲಿಯನ್‌ ಡಾಲರುಗಳಷ್ಟಿದೆ. ಆ ಮೂಲಕದ ಮಸ್ಕ್‌ ಅರ್ನಾಲ್ಟ್‌ ಅವರನ್ನು ಹಿಂದಿಕ್ಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!