ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ: ಮೊದಲ ದಿನ 208 ರನ್‌ ಗಳಿಸಿದ ಟೀಮ್ ಇಂಡಿಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಮೊದಲ ಟೆಸ್ಟ್‌ (First Test) ಮೊದಲ ದಿನವೇ ಭಾರತ (Team India) 8 ವಿಕೆಟ್‌ ಕಳೆದುಕೊಂಡು 208 ರನ್‌ ಗಳಿಸಿದೆ.

ರಬಾಡ ಮಾರಕ ಬೌಲಿಂಗ್‌ ದಾಳಿಗೆ ಭಾರತ 24 ರನ್‌ ಗಳಿಸುವಷ್ಟರಲ್ಲೇ ರೋಹಿತ್‌ ಶರ್ಮಾ, ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌ ಅವರ ವಿಕೆಟ್‌ ಕಳೆದುಕೊಂಡಿತ್ತು.

ಈ ಹಂತದಲ್ಲಿ ವಿರಾಟ್‌ ಕೊಹ್ಲಿ (Virat kohli) ಮತ್ತು ಶ್ರೇಯಸ್‌ ಅಯ್ಯರ್‌ ನಾಲ್ಕನೇ ವಿಕೆಟಿಗೆ 68 ರನ್‌ ಜೊತೆಯಾಟವಾಡಿ ಸ್ವಲ್ಪ ಚೇತರಿಕೆ ನೀಡಿದರು. ಕೊಹ್ಲಿ 38 ರನ್‌, ಶ್ರೇಯಸ್‌ ಅಯ್ಯರ್‌ 31 ರನ್‌ ಗಳಿಸಿ ಔಟಾದರು.

ಇತ್ತ ವಿಕೆಟ್‌ ಕಳೆದುಕೊಳ್ಳುತ್ತಿದ್ದರೂ ಕೆಎಲ್‌ ರಾಹುಲ್‌ (KL Rahul) ತಾಳ್ಮೆಯ ಆಟವಾಡಿ ಔಟಾಗದೇ 70 ರನ್‌ ಹೊಡೆದರೆ, ಶಾರ್ದೂಲ್‌ ಠಾಕೂರ್‌ 24 ರನ್‌ ಹೊಡೆದು ಸಾಥ್‌ ನೀಡಿದರು. ಸದ್ಯ ಮೊಹಮ್ಮದ್‌ ಸಿರಾಜ್‌ 0 ರನ್‌ ಹೊಡೆದು ಬುಧವಾರಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!