ದಿನಭವಿಷ್ಯ
ಮೇಷ
ಅಂಕಿಅಂಶಗಳ ಜತೆ, ಹಣದ ಜತೆ ವ್ಯವಹರಿಸುವಾಗ ಎಚ್ಚರ ವಹಿಸಿ. ತಪ್ಪುಗಳು ಘಟಿಸಬಹುದು.ಎರಡು ದಿನ ಪ್ರಮುಖ ನಿರ್ಧಾರ ತಾಳದಿರಿ.
ವೃಷಭ
ಗೊಂದಲದ ಮನಸ್ಥಿತಿ. ಕಾರ್ಯದಲ್ಲಿ ನಿರಾಸಕ್ತಿ. ಇದರಿಂದಾಗಿ ಉದಾಸ ಭಾವದಲ್ಲೇ ದಿನ ಕಳೆಯುವುದು. ಹುರುಪು ತಂದುಕೊಳ್ಳಿ. ಎಲ್ಲರ ಜತೆ ಬೆರೆಯಿರಿ.
ಮಿಥುನ
ಸಮಾನಾಸಕ್ತಿಯ ವ್ಯಕ್ತಿಗಳ ಜತೆ ಬೆರೆಯುವ ಅವಕಾಶ. ವಿಚಾರ ವಿನಿಮಯ. ಕೌಟುಂಬಿಕ ವಿಚಾರಗಳು ತುಸು ಕ್ಷೆಭೆಗೆ ಕಾರಣವಾದೀತು.
ಕಟಕ
ಹೊಸ ವ್ಯವಹಾರ ಆರಂಭಿಸಲು ಸೂಕ್ತ ಕಾಲವಲ್ಲ. ಆರ್ಥಿಕವಾಗಿ ಕೆಲವರ ಮೇಲೆ ಅವಲಂಬಿತರಾಗುವಿರಿ. ಅವರ ಜತೆ ಚೆನ್ನಾಗಿ ವ್ಯವಹರಿಸಿರಿ.
ಸಿಂಹ
ಕೆಲವು ವಿಷಯಗಳಲ್ಲಿ ಹೊಂದಾಣಿಕೆಯ ನಡೆ ಅವಶ್ಯ. ನಿಮ್ಮ ಅಹಂನಿಂದ ಇತರರ ಜತೆ ಬೆರೆಯಲು ಕಷ್ಟವಾದೀತು. ಸ್ವಭಾವ ತಿದ್ದಿಕೊಳ್ಳಿ.
ಕನ್ಯಾ
ಮನೆಯಲ್ಲಿ ಶಾಂತಿ ನೆಲೆಸಬೇಕಾದರೆ ವಾಗ್ವಾದದಿಂದ ದೂರವಿರಿ. ಕುಟುಂಬಸ್ಥರ ಸಹಕಾರ ನಿಮಗಿಂದು ದೊರಕದು. ಆರ್ಥಿಕ ಒತ್ತಡ.
ತುಲಾ
ಸಮಸ್ಯೆಯೊಂದು ಕಾಡುತ್ತಿದ್ದರೆ ಅದಕ್ಕೆ ಪರಿಹಾರದ ದಾರಿ ಇಂದು ತೋರುವುದು. ಉದ್ಯೋಗದಲ್ಲಿ ಹೊಸ ಅವಕಾಶ. ಕೌಟುಂಬಿಕ ಸಾಮರಸ್ಯ.
ವೃಶ್ಚಿಕ
ವೃತ್ತಿಯ ಹೊಣೆಗಾರಿಕೆ ಜತೆಗೇ ಕೌಟುಂಬಿಕ ಕರ್ತವ್ಯ ಕೂಡ ನೆರವೇರಿಸಿ. ಯಾವುದನ್ನೂ ಕಡೆಗಣಿಸುವುದು ತರವಲ್ಲ.
ಧನು
ನಿಮ್ಮ ಜೀವನ ಶೈಲಿ ಬದಲಿಸಲು ಯೋಜಿಸಿದ್ದರೆ ಇಂದು ನಿಮಗೆ ಪೂರಕ ದಿನವಲ್ಲ. ಕೆಲವು ಅನಪೇಕ್ಷಿತ ಬೆಳವಣಿಗೆ ಉಂಟಾದೀತು.
ಮಕರ
ಶುಭ ಸಮಾಚಾರಕ್ಕೆ ಕಾಯುತ್ತಿದ್ದರೆ ಇಂದು ಅದು ಸಾಕಾರವಾಗಲಿದೆ. ಆರೋಗ್ಯಕ್ಕೆ ಸಂಬಂಧಿಸಿ ತುಸು ಸಮಸ್ಯೆ ಉಂಟಾದೀತು. ಖರ್ಚು ಹೆಚ್ಚುವುದು.
ಕುಂಭ
ಪ್ರೀತಿಗೆ ಸಂಬಂಧಿಸಿ ಕೆಲವು ಮಹತ್ವದ ಬೆಳವಣಿಗೆ ಉಂಟಾದೀತು. ಸಹನೆಯಿಂದ ಮುಂದವರಿಯಿರಿ. ಸಲಹೆ ಪಡೆಯಿರಿ.
ಮೀನ
ಸಂಬಂಧದಲ್ಲಿ ಸೂಕ್ಷ್ಮ ಸಂವೇದಿಯಾಗಿ ವರ್ತಿಸುವಿರಿ. ಎಚ್ಚರದಿಂದ ನಡಕೊಳ್ಳದಿದ್ದರೆ ಆತ್ಮೀಯ ಸಂಬಂಧ ಹಾಳಾಗಬಹುದು.