Monday, December 11, 2023

Latest Posts

ಪಠ್ಯ ಪುಸ್ತಕ ಪರಿಷ್ಕರಣೆ ಆಗ – ಈಗ : ಕುವೆಂಪುರಿಂದ ಬಸವಣ್ಣನವರೆಗೆ ನೀವು ತಿಳಿದಿರಬೇಕಾದ ಸತ್ಯಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕುವೆಂಪು – ಈ ಹಿಂದೆ ಸಿದ್ಧರಾಮಯ್ಯ ಸರ್ಕಾರದಲ್ಲಿ ಬರಗೂರು ರಾಮಚಂದ್ರಪ್ಪ ಕಮಿಟಿಯ ಅಡಿಯಲ್ಲಿ ಕುವೆಂಪುರವರ ಅಜ್ಜಯ್ಯನ ಅಭ್ಯಂಜನ, ಅನಲೆ, ಹಸುರು ಸೇರಿದಂತೆ ಹಲವಾರು ಗದ್ಯಗಳನ್ನು ಕೈಬಿಡಲಾಗಿತ್ತು. ಹಿಂದಿನ ಪರಿಷ್ಕರಣೆಯಲ್ಲಿದ್ದ 8 ಕೃತಿಗಳಲ್ಲಿ ಒಂದನ್ನು ಕೈಬಿಟ್ಟು ಒಟ್ಟೂ ಕೇವಲ 7 ಕೃತಿಗಳನ್ನು ಮಾತ್ರವೇ ಸೇರಿಸಲಾಗಿತ್ತು. ಆದರೆ ರೋಹಿತ್‌ ಚಕ್ರತೀರ್ಥ ಅವರ ನೇತೃತ್ವದ ಕಮಿಟಿಯಲ್ಲಿ ಬಿಟ್ಟುಹೋದ ವಿಚಾರಗಳನ್ನು ಸೇರಿಸಲಾಗಿದೆ. ಅಲ್ಲದೇ ಶ್ರೀ ರಾಮಾಯಣ ದರ್ಶನಂ ಕೃತಿಯ ವಿಚಾರಗಳೂ ಸೇರಿದಂತೆ ಒಟ್ಟು 10 ಕೃತಿಗಳನ್ನು ಸೇರಿಸಲಾಗಿದೆ. ಇದು ಹಿಂದಿನ ಪರಿಷ್ಕರಣೆಗೆ ಹೋಲಿಸಿದರೆ 3 ಕೃತಿಗಳನ್ನು ಹೆಚ್ಚಿನದಾಗಿ ಸೇರ್ಪಡೆಯಾದಂತಾಗಿದೆ.

ಕೆಂಪೇಗೌಡ – ಬರಗೂರು ಸಮಿತಿಯಲ್ಲಿ ಬೆಂಗಳೂರಿನ ಪರಿಚಯದ ಅಧ್ಯಾಯದಿಂದ ಕೆಂಪೇಗೌಡರ ಹೆಸರನ್ನೇ ಕೈಬಿಡಲಾಗಿತ್ತು. ಆದರೆ ರೋಹಿತ್‌ ಚಕ್ರತೀರ್ಥ ಸಮಿತಿಯು ಕೆಂಪೇಗೌಡರ ಹೆಸರು ಹಾಗೂ ಬೆಂಗಳೂರಿನ ನಿರ್ಮಾಣದಲ್ಲಿ ಅವರ ಕೊಡುಗೆಗಳನ್ನು ಸೇರ್ಪಡೆಗೊಳಿಸಿದೆ.

ಟಿಪ್ಪು – ಬರಗೂರು ಸಮಿತಿಯ ಪಠ್ಯದಲ್ಲಿ ಮೈಸೂರಿನ ಅಧ್ಯಾಯದಲ್ಲಿ ಒಡೆಯರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅವರ ಪರಿಷ್ಕರಣೆಯಲ್ಲಿ ಒಡೆಯರ ಬಗೆಗಿನ 5 ಪುಟಗಳನ್ನು ಒಂದು ಪ್ಯಾರಾಗೆ ಇಳಿಸಲಾಗಿತ್ತು. ಟಿಪ್ಪುವನ್ನು ಮೈಸೂರಿನ ಏಕೈಕ ರಾಜ ಎಂಬಂತೆ ತೋರಿಸಲಾಗಿದೆ. ಅಲ್ಲದೇ ಟಿಪ್ಪುವಿನ ಬಗೆಗಿದ್ದ ಒಂದು ಪ್ಯಾರಾವನ್ನು ಆರು ಪ್ಯಾರಾಗಳಿಗೆ ಹೆಚ್ಚಿಸಲಾಗಿತ್ತು ಜೊತೆಗೆ ಆತನ ದೌರ್ಜನ್ಯಗಳನ್ನು ಮರೆಮಾಚಲಾಗಿತ್ತು. ರೋಹಿತ್‌ ಚಕ್ರತೀರ್ಥ ಅವರ ಸಮಿತಿಯು ತನ್ನ ಪರಿಷ್ಕರಣೆಯಲ್ಲಿ ಮೈಸೂರಿನ ಇತಿಹಾಸದಲ್ಲಿ ನೂರಾರು ವರ್ಷಗಳ ಕಾಲ ಆಳಿದ ಒಡೆಯರ್‌ ಸಂಸ್ಥಾನಕ್ಕೆ ಪಠ್ಯ ಪುಸ್ತಕಗಳಲ್ಲಿ ಸೂಕ್ತಸ್ಥಾನಮಾನ ನೀಡಿದೆ. ಕೇವಲ 17 ವರ್ಷ ಆಳ್ವಿಕೆ ನಡೆಸಿದ ಟಿಪ್ಪುವನ್ನು ಕೈಬಿಟ್ಟಿಲ್ಲ. ಟಿಪ್ಪುವಿನ ವಾಸ್ತವಿಕ ಇತಿಹಾಸವನ್ನು ಸೇರಿಸಲಾಗಿದೆ.

ಬಸವಣ್ಣ – ಬರಗೂರು ಸಮಿತಿಯು ಬಸವಣ್ಣ ಹಾಗೂ ದೇವರ ದಾಸೀಮಯ್ಯನವರ ವಚನಗಳನ್ನು ಬಿಟ್ಟುಬಿಟ್ಟಿತ್ತು. ಆದರೆ ರೋಹಿತ್‌ ಚಕ್ರತೀರ್ಥರವರ ಸಮಿತಿಯು ನೂತನ ಪಠ್ಯಕ್ರಮದಲ್ಲಿ ಈ ವಚನಗಳನ್ನು ಸೇರಿಸಿದೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!