ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಸುದೀಪ್ ಅವರ ಕಾಮೆಂಟ್‌ಗಳು ಇತ್ತೀಚೆಗೆ ಹಾಟ್ ಟಾಪಿಕ್ ಆಗಿವೆ. ಈ ಹೇಳಿಕೆಯಲ್ಲಿ ಅವರು ‘ನೋಡುವವರಿಗಾಗಿ ಸಿನಿಮಾ ಮಾಡಿ. ನೋಡದೆ ಇದ್ದವರು ನೋಡೋದು ಬೇಡ’ ಎಂದಿದ್ದರು. ಇದನ್ನು ದರ್ಶನ್ ಅಭಿಮಾನಿಗಳಿಗೆ ಹೇಳಿದ್ದಾರೆ ಎಂದು ಹಲವರು ಭಾವಿಸಿದ್ದರು. ಇದನ್ನು ಸುದೀಪ್ ಬಹಿರಂಗಪಡಿಸಿದ್ದಾರೆ.
‘ಅದು ದರ್ಶನ್ ಫ್ಯಾನ್ಸ್ಗೆ ಕೊಟ್ಟ ಟಾಂಟ್ ಅಲ್ಲ. ನಾನು ಹೇಳೋದಾದರೆ ನೇರವಾಗಿ ಹೇಳುತ್ತೇನೆ’ ಎಂದಿದ್ದಾರೆ.
ನಾನು ಯಾರನ್ನೂ ಗೇಲಿ ಮಾಡುವ ಪ್ರಕಾರ ಅಲ್ಲ, ಆದರೆ ಎಲ್ಲಾ ಅಭಿಮಾನಿಗಳು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ ಎಂದು ನೇರವಾಗಿ ಹೇಳುತ್ತೇನೆ. ನನ್ನನ್ನು ಕ್ಷಮಿಸಿ, ನಮ್ಮ ಅಭಿಮಾನಿಗಳು ತಪ್ಪು ಮಾಡಿದರೆ, ಕರೆದು ಹೇಳಬಹುದು. ಬೇರೆಯವರ ಬಗ್ಗೆ ನಮಗೆ ಗೊತ್ತಿಲ್ಲ. ನಾನು ಕರೆಕ್ಷನ್ ಮಾಡೋಕೆ ಹುಟ್ಟಿಲ್ಲ. ಸರಿ ಹೋಗಲು ಟೈಮ್ ಕೊಡಿ. ಏನಾದರೂ ಇದ್ದರೆ ನೇರವಾಗಿ ಹೇಳ್ತೀನಿ. ಎಲ್ಲವನ್ನೂ ಲಿಂಕ್ ಮಾಡಬೇಡಿ ಎಂದು ಸುದೀಪ್ ಹೇಳಿದ್ದಾರೆ.