ಮೋದಿಗಾಗಿ ಹರಕೆ ಕಟ್ಟಿಕೊಂಡ 102 ವರ್ಷದ ಅಜ್ಜಿ, ಅಷ್ಟಕ್ಕೂ ಯಾವ ಕಾರಣಕ್ಕೆ ಈ ಹರಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚುನಾವಣೆ ಸಮೀಪಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಅನೇಕರು ಬಯಸುತ್ತಿದ್ದಾರೆ. ಇದೀಗ ಮೋದಿ ಮತ್ತೆ ಪ್ರಧಾನಿಯಾಗಬೇಕು ಅಂತ ಇಲ್ಲೊಬ್ಬರು ಅಜ್ಜಿ ಮಲೆಮಾದೇಶ್ವರ ಬೆಟ್ಟಕ್ಕೆ ಹರಕೆ ಕಟ್ಟಿಕೊಂಡು ಬೆಟ್ಟ ಹತ್ತಿದ್ದಾರೆ.

ಅದರಲ್ಲಿ ಆಶ್ಚರ್ಯಕರ ಸಂಗತಿಯೆಂದರೆ. 102 ವರ್ಷದ ಅಜ್ಜಿಯೊಬ್ಬರು ಕಾಡಿನ ರಸ್ತೆಯಲ್ಲಿ ಬೆಟ್ಟವನ್ನು ಹತ್ತಿ. ಪ್ರಧಾನಿ ಮೋದಿಯವರು ದೇಶಕ್ಕೆ ಒಳ್ಳೆಯದನ್ನು ಮಾಡಬೇಕು ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದೇಶಕ್ಕೆ ಒಳ್ಳೆದಾಗಬೇಕು, ರೈತರಿಗೆ ಒಳ್ಳೆದಾಗಬೇಕು, ಕಾಡು ಪ್ರಾಣಿಗಳಿಗೆ ನೀರಿಲ್ಲ. ದೇಶನೂ ಉದ್ಧಾರ ಆಗುತ್ತೆ. ಮೋದಿ ಬರ್ಬೇಕು’ ಎಂದು ಹೇಳಿದ್ದಾರೆ. ಇದರಿಂದ ಅಲ್ಲಿ ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಅಜ್ಜಿಗೆ ಜೈಕಾರ ಹಾಕಿದರು. ಸದ್ಯ ಈ ವಿಡಿಯೋ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!