CAFE BLAST | ಹತ್ತು ಬಸ್ ಬದಲಾಯಿಸಿದ್ರೂ ಟಿಕೆಟ್ ತೆಗೆದುಕೊಂಡಿಲ್ಲ ಬ್ಲಾಸ್ಟರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮೇಶ್ವರಂ ಕೆಫೆಯ ಬ್ಲಾಸ್ಟರ್‌ನ್ನು ಹುಡುಕಾಟ ತೀವ್ರವಾಗಿದೆ. ಶಂಕಿತ ಉಗ್ರ ಬ್ಲಾಸ್ಟ್‌ಗಾಗಿ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದು, ಒಂದು ಸುಳುಹನ್ನೂ ಬಿಟ್ಟಿಲ್ಲ.

ತನ್ನ ಎಸ್ಕೇಪ್ ಪ್ಲಾನ್‌ಗೆ ಬಿಎಂಟಿಸಿ ಬಸ್‌ಗಳನ್ನು ನಂಬಿಕೊಂಡಿದ್ದ ಬ್ಲಾಸ್ಟರ್ ಸುಮಾರು ೧೦-೧೫ ಬಸ್‌ಗಳಲ್ಲಿ ಓಡಾಟ ನಡೆಸಿದ್ದಾನೆ. ಯಾವೆಲ್ಲಾ ನಿಲ್ದಾಣಗಳಲ್ಲಿ ಕ್ಯಾಮೆರಾ ಇಲ್ಲ ಎಂದು ಮೊದಲೇ ನೋಡಿಕೊಂಡಿದ್ದು ಆ ನಿಲ್ದಾಣಗಳಲ್ಲಿ ಮಾತ್ರ ಬಸ್‌ನಿಂದ ಇಳಿದಿದ್ದಾನೆ.

ಇನ್ನು ಟಿಕೆಟ್ ಪಡೆದರೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇರುವ ಕಾರಣದಿಂದಾಗಿ ಆತ ಬಸ್ ಪಾಸ್ ಖರೀದಿ ಮಾಡಿದ್ದಾನೆ. ಪ್ರತೀ ಬಸ್‌ನಲ್ಲಿ ಪಾಸ್ ತೋರಿಸಿ ಮುಂದೆ ಹೋಗಿದ್ದಾನೆ.

ಎಲ್ಲಿಯೂ ಅನುಮಾನ ಬಾರದಂತೆ ಡಮ್ಮಿ ಫೋನ್ ಬಳಕೆ ಮಾಡಿ ಫೋನ್‌ನಲ್ಲಿ ಮಾತನಾಡುತ್ತಿರುವಂತೆ ಕುತ್ತಿಗೆ ಬಗ್ಗಿಸಿಕೊಂಡಿದ್ದಾನೆ. ಮುಖಕ್ಕೆ ಮಾಸ್ಕ್, ತಲೆಗೆ ಟೋಪಿ ಹಾಗೂ ಕಣ್ಣಿಗೆ ಕನ್ನಡಕ ಹಾಕಿದ್ದಾನೆ. ಆದಷ್ಟು ಕುತ್ತಿಗೆ ಬಗ್ಗಿಸಿ ನಡೆದ ಕಾರಣ ಎಲ್ಲಿಯೂ ಆತನ ಮುಖ ಸ್ಪಷ್ಟವಾಗಿ ಕಂಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!