ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ಆಹಾರ ಪದ್ಧತಿಯಲ್ಲಿ ಜೀರ್ಣಕ್ರಿಯೆ ಸಮಸ್ಯೆ ಕಾಡುತ್ತದೆ. ರುಚಿಯಾದ ಆಹಾರ ಬೇಕು ಅಂತ ಆರೋಗ್ಯ ನಿರ್ಲಕ್ಷಿಸುತ್ತಿದ್ದೇವೆ.ಇದರಿಂದ ನಮ್ಮಲ್ಲಿ ಮಲಬದ್ಧತೆ ಸಮಸ್ಯೆ ಹೆಚ್ಚಾಗಿ ಕಾಡುತ್ತೆ. ಮಲಬದ್ಧತೆ ಓಡಿಸಲು ಈ ಐದು ಆಹಾರ ತುಂಬಾ ಪ್ರಯೋಜನಕಾರಿ..
ಅಗಸೆ ಬೀಜ: ಅಗಸೆ ಬೀಜವನ್ನು ನೀರಿನಲ್ಲಿ ನೆನೆಸಿಟ್ಟು ರುಬ್ಬಿಕೊಳ್ಳಬೇಕು. ನಂತರ ಅದನ್ನು ಹಾಲಿನೊಂದಿಗೆ ಬೆರಸಿ ಸೇವಿಸಬೇಕು.
ಓಟ್ಸ್: ಇದರಲ್ಲಿ ಹೆಚ್ಚಿನ ನಾರಿನಾಂಶವಿದ್ದು, ಮಲ ವಿಸರ್ಜನೆಯನ್ನು ಸುಲಭಗೊಳಿಸುತ್ತದೆ.
ಅಂಜೂರ: ಇದರಿಂದ ಮಲಬದ್ಧತೆ ಸಮಸ್ಯೆಗೆ ಶೀಘ್ರ ಪರಿಹಾರ ಸಿಗುತ್ತದೆ. ಇದರಲ್ಲಿ ಹೆಚ್ಚಿನ ವಿಟಮಿನ್ ಬಿ6 ಅಂಶ ಇರಲಿದೆ.
ಸೇಬು: ಇದರಿಲ್ಲಿನ ನೀರು ಹಾಗೂ ನಾರಿನಾಂಶ ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ.
ಒಣದ್ರಾಕ್ಷಿ: ಇದರಲ್ಲಿ ಹೆಚ್ಚಿನ ಸೋರ್ಬಿಟೋಲ್ ಅಂಶವಿದ್ದು, ಇದರಿಂದ ಜೀರ್ಣ ವ್ಯವಸ್ಥೆ ಸುಧಾರಣೆಯಾಗಲಿದೆ.
ಹಸಿರು ತರಕಾರಿ: ಪಾಲಕ್ ಸೊಪ್ಪು, ಮೊಳಕೆ ಕಾಳುಗಳ ಸೇವನೆಯಿಂದ ಮಲಬದ್ಧತೆ ಕಡಿಮೆಯಾಗುತ್ತದೆ.