ದಿಗಂತ ವರದಿ ಮಂಗಳೂರು:
ಉಡುಪಿಯ ಜನಪ್ರಿಯ ಶೆಟ್ಟಿ ಬಾರ್ ಮಾಲೀಕರ ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಮಾನಂದ ಶೆಟ್ಟಿ ಅವರ ಪತ್ನಿ ಅಶ್ವಿನಿ ಇಂದು ಕೊನೆಯುಸಿರೆಳೆದಿದ್ದಾರೆ.
ರಮಾನಂದ್ ಶೆಟ್ಟಿ ಅವರ ಪತ್ನಿ ಅಶ್ವಿನಿ ಶೆಟ್ಟಿ (47) ಚಿಕಿತ್ಸೆ ಫಲಿಸದೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ಹಿರಿಯ ಮಗನೊಂದಿಗೆ ರೀಲ್ಸ್ ಮಾಡಿ ಅಶ್ವಿನಿ ಖ್ಯಾತಿ ಪಡೆದಿದ್ದರು.
ಬೆಂಕಿ ಕೆನ್ನಾಲಿಗೆಗೆ ಗಂಭಿರವಾಗಿ ಗಾಯಗೊಂಡಿದ್ದ ಅಶ್ವಿನಿ ಉಸಿರಾಟ ಹಾಗೂ ಶಾಸ್ವಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಘಟನೆಯಲ್ಲಿ ಇವರ ಇಬ್ಬರು ಮಕ್ಕಳು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರೆದಿದೆ.
ಮೊನ್ನೆ ತಡರಾತ್ರಿ ರಮಾನಂದ್ ಶೆಟ್ಟಿ ಅವರ ಮನೆಗೆ ಬೆಂಕಿ ಹೊತ್ತಿಕೊಂಡಿತ್ತು. ಅಗ್ನಿ ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ. ಇನ್ನು ಬೆಂಕಿಯಿಂದ ಮನೆಯೆಲ್ಲ ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಒಳಗಿದ್ದ ವಸ್ತುಗಳೆಲ್ಲ ನಾಶವಾಗಿವೆ. ಅಗ್ನಿ ಅವಘಡದಲ್ಲಿ ರಮಾನಂದ ಶೆಟ್ಟಿ ಮೃತಪಟ್ಟಿದ್ದು, ಮಕ್ಕಳು ಕೂಡ ಗಾಯಗೊಂಡಿದ್ದರು. ಮಕ್ಕಳು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.