CINE | ಪ್ರಿಯಾಂಕ ಚೋಪ್ರಾ ಗ್ರ್ಯಾಂಡ್‌ ಕಮ್‌ಬ್ಯಾಕ್‌, ʼಟೈಗರ್‌ʼಗೆ ದನಿಯಾಗಲಿದ್ದಾರೆ ನಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಪ್ರಿಯಾಂಕ ಚೋಪ್ರಾ ಇದೀಗ ಬಿಗ್‌ ಕಮ್‌ಬ್ಯಾಕ್‌ ಮಾಡಿದ್ದಾರೆ. ನಟನೆ ಮೂಲಕ ಅಲ್ಲ, ವಾಯ್ಸ್‌ ಓವರ್‌ ನೀಡುವ ಮೂಲಕ. ಹೌದು, ಪ್ರಿಯಾಂಕ ಟೈಗರ್‌ ಹೆಸರಿನ ಡಾಕ್ಯುಮೆಂಟರಿಗೆ ಧನಿಯಾಗಲಿದ್ದಾರೆ.

ಪ್ರಾಣಿ, ಪಕ್ಷಿ ಹಾಗೂ ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಪ್ರಿಯಾಂಕ ಇಷ್ಟಪಟ್ಟು ಟೈಗರ್‌ ಡಾಕ್ಯುಮೆಂಟರಿಗೆ ಧ್ವನಿಯಾಗಿದ್ದಾರೆ.

ಇದಕ್ಕಾಗಿ ಅಭಿಮಾನಿಗಳು ಕಾತರರಾಗಿದ್ದಾರೆ. ಬ್ರಿಟಿಷ್ ಬರಹಗಾರ, ನಿರ್ದೇಶಕ ಹಾಗೂ ನಿರ್ಮಾಪಕ ಮಾರ್ಕ್ ಲೈನ್‍ ಫೀಲ್ಸ್ ಅವರು ಈ ಚಿತ್ರವನ್ನು ತಯಾರಿಸಿದ್ದು, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಈ ಡಾಕ್ಯುಮೆಂಟರಿ ಪ್ರಸಾರವಾಗಲಿದೆ. ಈ ಕುರಿತಂತೆ ಕೆಲವು ವಿವರಗಳನ್ನು ಪ್ರಿಯಾಂಕಾ ಚೋಪ್ರಾ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!