ರಾಷ್ಟ್ರೀಯ ಹೈಡ್ರೋಜನ್‌ ಮಿಷನ್‌ಗೆ ಬಲತುಂಬಲಿದೆ ಈ ಎರಡು ಕಂಪನಿಗಳ ನಡುವಿನ ಒಪ್ಪಂದ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ರಾಷ್ಟ್ರೀಯ ಹೈಡ್ರೋಜನ್‌ ಮಿಷನ್‌ ಗೆ ಅನುಗುಣವಾಗಿ ಸರ್ಕಾರಿ ಸ್ವಾಮ್ಯದ ಆಯಿಲ್‌ ಅಂಡ್‌ ನ್ಯಾಚುರಲ್‌ ಗ್ಯಾಸ್‌ ಕಾರ್ಪೋರೇಷನ್‌ ಲಿಮಿಟೆಡ್ (ONGC) ಕಂಪೆನಿಯು ಗ್ರೀನ್ಕೋ ಝೀರೋಸಿ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ತಿಳುವಳಿಕೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು, ಹಸಿರು ಅಮೋನಿಯಾ ಮತ್ತು ಹಸಿರು ಹೈಡ್ರೋಜನ್‌ನ ಇತರ ಉತ್ಪನ್ನಗಳಲ್ಲಿ ಜಂಟಿಯಾಗಿ ಹೊಸ ಅವಕಾಶಗಳನ್ನು ತೆರದಿಡುವ ಗುರಿಯೊಂದಿಗೆ ಎರಡೂ ಕಂಪನಿಗಳು ಒಂದಾಗಿವೆ.

ಗ್ರೀನ್ಕೋ ಝೀರೋಸಿ ಪ್ರೈವೇಟ್ ಲಿಮಿಟೆಡ್‌ ಇದು ಭಾರತದ ಮುಂಚೂಣಿಯಲ್ಲಿರುವ ನವೀಕರಿಸಬಹುದಾದ ಇಂಧನ ಕಂಪನಿಯಾಗಿದೆ. ಈ ಒಪ್ಪಂದವು ಎರಡು ವರ್ಷಗಳ ಅವಧಿಯವರೆಗೆ ಮಾನ್ಯತೆ ಪಡೆದಿರುತ್ತದೆ. ಭಾರತವನ್ನು ಜಾಗತಿಕ ಹಸಿರು ಹೈಡ್ರೋಜನ್ ಹಬ್ ಮಾಡುವ ಗುರಿಯನ್ನು ಹೊಂದಿರುವ ಸರ್ಕಾರದ ರಾಷ್ಟ್ರೀಯ ಹೈಡ್ರೋಜನ್ ಮಿಷನ್‌ಗೆ ಈ ಒಪ್ಪಂದವು ಮತ್ತಷ್ಟು ಬಲ ತುಂಬಲಿದೆ. 2030ರ ವೇಳೆಗೆ ವಾರ್ಷಿಕವಾಗಿ 5 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಉತ್ಪಾದಿಸುವ ಭಾರತದ ಗುರಿಗೆ ಈ ಒಪ್ಪಂದವು ಇಂಬು ನೀಡಲಿದೆ.

ಒಎನ್‌ಜಿಸಿಯ ಎನರ್ಜಿ ಸ್ಟ್ರಾಟಜಿ 2040 ರ ಪ್ರಕಾರ ನವೀಕರಿಸಬಹುದಾದ ಇಂಧನ ಗುರಿಗಳನ್ನು ಸಾಧಿಸಲು ಒಂದು ಮೆಟ್ಟಿಲಾಗಿ ಈ ಒಪ್ಪಂದವು ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿದೆ. ನವೀಕರಿಸಬಹುದಾದ ಇಂಧನಗಳ ಉತ್ಪಾದನೆಯ ವೇಗವನ್ನು ಹೆಚ್ಚಿಸುವ ಮೂಲಕ ಇಂಗಾಲ ಗುರುತನ್ನು ಕಡಿಮೆ ಮಾಡುವ ಗುರಿಯನ್ನು ಒಎನ್‌ಜಿಸಿ ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!