ವಿದೇಶದಲ್ಲೂ ‘ಲೋಕ’ ಸಮರದ ಹವಾ: ಆಸ್ಟ್ರೇಲಿಯಾದಲ್ಲಿ ಮೋದಿ ಗೆಲುವಿಗಾಗಿ ಶುರುವಾಗಿದೆ ಅಭಿಯಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಭಾರತದ ಲೋಕಸಭಾ ಚುನಾವಣೆಯ ಗಾಳಿ ವಿದೇಶದಲ್ಲೂ ಅವರಿಸಿದೆ . ಇಲ್ಲಿ ವಿವಿಧ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಸತತ ಮೂರನೇ ಬಾರಿ ಅಧಿಕಾರಕ್ಕೆ ಬರಲು ಪಣತೊಟ್ಟಿದೆ.

ಅತ್ತ ಮೋದಿಗೆ ವಿದೇಶಗಳಲ್ಲಿರುವ ಭಾರತೀಯ ಸಮುದಾಯಗಳ ಜನರು ಸತತವಾಗಿ ಬೆಂಬಲ ಕೊಡುತ್ತಾ ಬಂದಿದ್ದಾರೆ. ಈ ಬಾರಿ ವಿದೇಶಗಳಲ್ಲೂ ಮೋದಿ ಪರ ಕಲರವ ಕೇಳಿಬರತೊಡಗಿದೆ.

ಆಸ್ಟ್ರೇಲಿಯಾದ ‘ಓವರ್​ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ’ (Overseas friends of BJP) ಸಂಘಟನೆಯು ‘ಮೋದಿ ಫಾರ್ 2024’ (Modi for 2024) ಎನ್ನುವ ಅಭಿಯಾನ ನಡೆಸುತ್ತಿದೆ. ಏಳು ಪ್ರಮುಖ ನಗರಗಳಲ್ಲಿ ಈ ಆಂದೋಲನ ನಡೆಯಲಿದೆ.

ಪಿಎಂ ಮೋದಿ ನೇತೃತ್ವದ ಬಿಜೆಪಿ ಮತ್ತು ಎನ್​ಡಿಎ ಮೈತ್ರಿಕೂಟಕ್ಕೆ ವಿದೇಶಗಳಲ್ಲಿ ಬೆಂಬಲ ತೋರಿಸಲು ಈ ಪ್ರಚಾರ ನಡೆಯುತ್ತಿದೆ. ಸಿಡ್ನಿ ಹಾರ್ಬರ್ ಬ್ರಿಡ್ಜ್, ಮೆಲ್ಬೋರ್ನ್ ಕ್ರಿಕೆಟ್ ಮೈದಾನ, ಪರ್ತ್ ಆಪ್ಟಸ್ ಸ್ಟೇಡಿಯಂ, ಬ್ರಿಸ್ಬೇನ್ ಗಾಬ್ಬಾ ಸ್ಟೇಡಿಯಂ, ಗೋಲ್ಡ್ ಕೋಸ್ಟ್​​ನ ಸರ್ಫರ್ಸ್ ಪ್ಯಾರಡೈಸ್, ಕ್ಯಾನ್​ಬೆರಾದ ಮೌಂಟ್ ಏನ್​ಸ್ಲೀ, ಅಡಿಲೇಡ್​ನ ನೇವಲ್ ಮೆಮೋರಿಯಲ್ ಗಾರ್ಡನ್​ನಲ್ಲಿ ದೊಡ್ಡ ಪ್ರಚಾರ ಕಾರ್ಯಕ್ರಮ ಆರಂಭಿಸಲಾಗಿದೆ.

ಇತ್ತೀಚೆಗೆ ಬ್ರಿಟನ್ ದೇಶದಲ್ಲಿರುವ ಓವರ್​ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ ಸಂಘಟನೆ ನರೇಂದ್ರ ಮೋದಿಗೆ ಚುನಾವಣೆಯಲ್ಲಿ ಬೆಂಬಲವಾಗಿ ಲಂಡನ್​ನಲ್ಲಿ ಕಾರ್ ರ್ಯಾಲಿ ನಡೆಸಿತ್ತು. 250 ಕಾರುಗಳು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಇಲ್ಲಿ ಜನರು ಭಾರತದ ರಾಷ್ಟ್ರಧ್ವಜ ಮತ್ತು ಬಿಜೆಪಿಯ ಧ್ವಜಗಳನ್ನು ಹಿಡಿದುಕೊಂಡಿದ್ದರು.

ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಏಪ್ರಿಲ್ 19ರಿಂದ ಏಳು ಹಂತಗಳಲ್ಲಿ ನಡೆಯುತ್ತದೆ. ಜೂನ್ 4ರಂದು ಮತ ಎಣಿಕೆ ಆಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!