ಒಟಿಟಿಯತ್ತ ಲಗ್ಗೆ ಇಟ್ಟ ‘ಆರ್ಟಿಕಲ್​ 370’ ಸಿನಿಮಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕೇಂದ್ರ ಸರ್ಕಾರವು ಕಾಶ್ಮೀರದಲ್ಲಿ ಆರ್ಟಿಕಲ್​ 370 ರದ್ದು ಮಾಡಿದ್ದ ಘಟನೆಗಳನ್ನು ಆಧರಿಸಿ ಮೂಡಿ ಬಂದ ಸಿನಿಮಾ ‘ಆರ್ಟಿಕಲ್​ 370’ .

ನಟಿ ಯಾಮಿ ಗೌತಮ್​ (Yami Gautam) ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಈ ಸಿನಿಮಾಗೆ ಒಳ್ಳೆಯ ಕಲೆಕ್ಷನ್​ ಆಗಿದೆ. ಇದೀಗ ಒಟಿಟಿಯಲ್ಲಿ ಅಬ್ಬರಿಸಲು ‘ಆರ್ಟಿಕಲ್​ 370’ ಸಿದ್ಧವಾಗಿದೆ.

ಆರಂಭದಲ್ಲೇ ‘ಆರ್ಟಿಕಲ್​ 370’ ಸಿನಿಮಾಗೆ ಸಾಧಾರಣ ಕಲೆಕ್ಷನ್​ ಆಯಿತು. ನಂತರದ ದಿನಗಳಲ್ಲಿ ಅದೇ ಸ್ಥಿತಿ ಮುಂದುವರಿಯಿತು. ಅಚ್ಚರಿ ಏನೆಂದರೆ, ಸತತ ಒಂದು ತಿಂಗಳ ಪ್ರದರ್ಶನದ ಬಳಿಕ ಭಾರತದ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾದ ಒಟ್ಟು ಕಲೆಕ್ಷನ್​ 78.33 ಕೋಟಿ ರೂಪಾಯಿ ಆಗಿದೆ. ಆ ಮೂಲಕ​ ಹಿಟ್​ ಎನಿಸಿಕೊಂಡಿತು. ಇನ್ನೇನು ಒಟಿಟಿಗೆ

ಇನ್ನು ವರದಿಗಳ ಪ್ರಕಾರ, ಏಪ್ರಿಲ್​ 19ರಂದು ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್​ ಆಗಲಿದೆ. ‘ಜಿಯೋ ಸಿನಿಮಾ’ ಮೂಲಕ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈ ಸಿನಿಮಾದಲ್ಲಿ ಯಾಮಿ ಗೌತಮ್​ ಅವರ ಜೊತೆ ಪ್ರಿಯಾಮಣಿ ಕೂಡ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ನರೇಂದ್ರ ಮೋದಿ ಪಾತ್ರವನ್ನು ಹಿರಿಯ ನಟ ಅರುಣ್​ ಗೋವಿಲ್​ ಅವರು ನಿಭಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!